ಸ್ತನ ಸ್ಪರ್ಶಿಸಲು ಬಿಟ್ಟರೆ ಅಂಕಪಟ್ಟಿ ಪ್ರಿನ್ಸಿ ಬೇಡಿಕೆ

ಆದರೆ, ವಿದ್ಯಾರ್ಥಿನಿಗಳ ಅಸಹಕಾರ ಹೆಚ್ಚಿ ಪೊಲೀಸರ ಮೊರೆ ಹೋಗುತ್ತಾರೆ ಎಂದು ತಿಳಿದ ವಿಕಾಸ್, ತಾನೇ ಮೊದಲು ಪೊಲೀಸರ ಬಳಿ ಹೋಗಿ ವಿದ್ಯಾರ್ಥಿಗಳಿಂದ ಕಿರುಕುಳ ಆಗುತ್ತಿದೆ, ತನಗೆ ಹಾಗೂ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಎಂದು ದೂರಿತ್ತಿದ್ದನು.ಆದರೆ ಪ್ರಗತಿ ಟ್ಯುಟೋರಿಯಲ್ ನ ಪ್ರಿನ್ಸಿಪಾಲ್ ಬಣ್ಣ ಬಯಲು ಮಾಡಲು ಪೊಲೀಸರಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ಫೀಸು ದರ ಇಳಿ ಸಲು, ವರ್ಗಾವಣೆ ಪತ್ರ, ಅಂಕಪಟ್ಟಿ ನೀಡಲು ಬೇರೆ ಬೇರೆ ರೀತಿ ಬೇಡಿಕೆ ಇಡುತ್ತಿದ್ದ ವಿಕಾಸ್ ನ ವರ್ತನೆಯಿಂದ ಬೇಸತ್ತ ಹೆಣ್ಮಕ್ಕಳು ಕೊನೆಗೂ ಪೊಲೀಸರ ಮೊರೆ ಹೊಕ್ಕಿದ್ದಾರೆ.
ಸುರತ್ಕಲ್ ಮುಖ್ಯ ಪೇಟೆಯಲ್ಲಿ ಪ್ರಗತಿ ಎಂಬ ಹೆಸರಿನ ಟ್ಯುಟೋರಿ ಯಲ್ ಆರಂಭಿಸಿರುವ ವಿಕಾಸ್ ಎಂಬಾತನೇ ಸ್ತನ ಸ್ಪರ್ಶಿಸುವ ಬೇಡಿಕೆ ಯೊಡ್ಡಿದಾತ, ವಿವಾಹಿತನಾಗಿದ್ದರೂ ತನ್ನ ಟ್ಯುಟೋರಿಯಲ್‌ಗೆ ಕಲಿಯಲು ಬರುವ ವಿದ್ಯಾರ್ಥಿನಿಯರ ಜೊತೆ ಸದಾ ಅನುಚಿತವಾಗಿ ವರ್ತಿಸುವ ಈತನ ಬಗ್ಗೆ ಕೆಲ ವರುಷಗಳ ಹಿಂದಿ ನಿಂದಲೂ ಆರೋಪಗಳ ಸರಮಾಲೆಯೇ ಇತ್ತು. ಫೀಸು ಕಡಿಮೆ ಮಾಡಬೇಕಾದರೆ ಇಲ್ಲವೇ ಅಂಕ ಪಟ್ಟಿ, ವರ್ಗಾವಣೆ ಪತ್ರ ವನ್ನು ನೀಡಬೇಕಾದರೆ ವಿದ್ಯಾರ್ಥಿನಿಯರು ತನ್ನ ಮಂಚಕ್ಕೆ ಬರಬೇಕೆಂದು ನೇರ ಆಹ್ವಾನವನ್ನೇ ಈತ ನೀಡುತ್ತಿದ್ದನೆಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ತೀರಾ ಬಡತನದಿಂದ ಬಂದಿರುವ ಹಳ್ಳಿಯ ಹೆಣ್ಮಕ್ಕಳು ಈತನ ಟ್ಯುಟೋ ರಿಯಲ್‌ಗೆ ಶಿಕ್ಷಣಕ್ಕೆ ಬರುತ್ತಿದ್ದು ಅವರು ತನ್ನ ಆಟಾಟೋಪವನ್ನು ಸಹಿಸುತ್ತಾರೆ ಇಲ್ಲವೆ ಸಹಕರಿಸುತ್ತಾರೆ ಎಂಬ ಹುಚ್ಚು ಕಲ್ಪನೆಯಲ್ಲಿ ಮೆರೆಯುತ್ತಿದ್ದ ಈತನ ವಿರುದ್ದ ಇದೀಗ ಅದೇ ಯುವತಿ ಯರು ತಿರುಗಿ ಬಿದ್ದಿದ್ದಾರೆ.
ಬಡ ವಿದ್ಯಾರ್ಥಿಗಳ ಆರ್ಥಿಕ ದುಃಸ್ಥಿತಿಯನ್ನು ಅರಿತು ಅದರ ಲಾಭವನ್ನು ಪಡೆಯಲು ಕಾಮುಕ ಯತ್ನಿಸುತ್ತಿದ್ದ. ಇತ್ತೀಚೆಗೆ ಮುಗಿದ ದ್ವಿತೀಯ ಪಿಯುಸಿ ಪರೀಕ್ಷೆ ಅಂಕಪಟ್ಟಿ, ವರ್ಗಾವಣೆ ಪತ್ರ ಪಡೆಯಲು ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ತನ್ನ ಕೊಠಡಿಗೆ ಕರೆಸಿಕೊಳ್ಳುತ್ತಿದ್ದ. ಹುಡುಗರಾದರೆ ಮನಸ್ಸಿಗೆ ತೋಚಿದಷ್ಟು ಹಣ ಪಡೆಯುತ್ತಿದ್ದ. ಹುಡುಗಿಯರು ಬಂದರೆ ಕಣ್ಣಲ್ಲಿ ಅವರ ದೇಹ ಸಿರಿ ಅಳೆಯುತ್ತ ಅಂಗಾಂಗಗಳನ್ನು ವರ್ಣಿಸುತ್ತಾ, ಅಶ್ಲೀಲ ಪದಗಳನ್ನು ಬಳಸಿ, ತನ್ನ ಕಾಮನೆಯನ್ನು ಹೊರಹಾಕುತ್ತಿದ್ದ. ಈತನ ಲೈಂಗಿಕ ಕಿರುಕುಳ ಹಾಗೂ ಬ್ಲ್ಯಾಕ್ ಮೇಲ್ ನಿಂದ ಬೇಸರಗೊಂಡ ಹಲವು ವಿದ್ಯಾರ್ಥಿನಿಯರು ಮಾಧ್ಯಮದ ಮೂಲಕ ಪೊಲೀಸರ ಮೇಲೆ ಒತ್ತಡ ತಂದು ಕಾಮಗುರುವಿನ ಮೇಲೆ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications