ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವಿನ ಓಘ: ಸಾನಿಯಾ ಸೆಮೀಸ್, ಬೋಪಣ್ಣ ಕ್ವಾರ್ಟರ್ ಗೆ

By Srinath
|
Google Oneindia Kannada News

Sania Mirza, Rohan Bopan
ಪ್ಯಾರಿಸ್‌ , ಮೇ 31: ಫ್ರೆಂಚ್‌ ಓಪನ್‌ ಪುರುಷರ ಮತ್ತು ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್‌ ಬೋಪಣ್ಣ ಗೆಲುವಿನ ಓಟ ಮುಂದುವರಿಸಿದ್ದಾರೆ. ಸಾನಿಯಾ ಮಿರ್ಜಾ-ಎಲೆನಾ ವೆಸ್ನಿನಾ ಸೆಮಿಫೈನಲ್‌ಗೆ ಲಗ್ಗೆಯಿರಿಸಿದರೆ, ಇಂಡೊ-ಪಾಕ್‌ ಜೋಡಿ ರೋಹನ್‌ ಬೋಪಣ್ಣ-ಐಸಮ್‌ ಉಲ್‌ ಹಕ್‌ ಕುರೇಶಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಸಾನಿಯಾ ಅವರು ಗ್ರ್ಯಾಂಡ್ ಸ್ಲಾಮ್ ಟೂರ್ನಿಯೊಂದರಲ್ಲಿ ಮಹಿಳೆಯರ ಡಬಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಈ ಹಿಂದೆ 2007ರ ಅಮೆರಿಕ ಓಪನ್ ಮತ್ತು 2008ರ ವಿಂಬಲ್ಡನ್ ಟೂರ್ನಿಯಲ್ಲಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಸೋಮವಾರದ ಕ್ವಾರ್ಟರ್ ಫೈನಲ್‌ ಸೆಣಸಾಟದಲ್ಲಿ 7ನೇ ಶ್ರೇಯಾಂಕಿತ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ನಂ. 1 ಜೋಡಿಯೆನಿಸಿದ ಆರ್ಜೆಂಟೈನಾದ ಗಿಸೆಲಾ ಡುಲ್ಕೊ- ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ ವಿರುದ್ಧ 6-0, 7-5 ಅಂತರದ ನೇರ ಸೆಟ್‌ಗಳ ಜಯ ದಾಖಲಿಸಿದರು.

ಇದಕ್ಕೂ ಮೊದಲು ನಡೆದ ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕಿತ ಜೋಡಿಯಾದ ಬೋಪಣ್ಣ-ಕುರೇಶಿ ಯಾವುದೇ ಶ್ರೇಯಾಂಕವಿಲ್ಲದ ಖಜಾಕಿಸ್ಥಾನದ ಆಂದ್ರೆ ಗೊಲೊಬೆವ್‌-ಉಜ್ಬೇಕಿಸ್ಥಾನದ ಡೆನ್ನಿಸ್‌ ಇಸ್ತೋಮಿನ್‌ ಅವರನ್ನು 6-3, 7-5 ಅಂತರದ ನೇರ ಸೆಟ್‌ಗಳಲ್ಲಿ ಕೆಡವಿತು. ಈ ಮುಖಾಮುಖಿ 69 ನಿಮಿಷಗಳ ಕಾಲ ಸಾಗಿತು.

ಇದು ಕಳೆದ 4 ಗ್ರ್ಯಾಂಡ್ ಸ್ಲಾಮ್ ಕೂಟಗಳಲ್ಲಿ ಬೋಪಣ್ಣ-ಕುರೇಶಿ ಜೋಡಿಯ 3ನೇ ಕ್ವಾರ್ಟರ್ ಫೈನಲ್‌ ಪ್ರವೇಶ. ಇವರಿನ್ನು ಅಮೆರಿಕದ ಅಗ್ರ ಶ್ರೇಯಾಂಕದ ಬ್ರ್ಯಾನ್‌ ಸಹೋದರರ ಸವಾಲನ್ನು ಎದುರಿಸಬೇಕಿದೆ. ಮೈಕ್‌ ಬ್ರ್ಯಾನ್‌-ಬಾಬ್‌ ಬ್ರ್ಯಾನ್‌ ಕೂಡಿಕೊಂಡು ರಷ್ಯಾದ ತೈಮುರಾಜ್‌ ಗಬಶ್ವಿ‌ಲಿ-ಕಜಾಕ್‌ಸ್ಥಾನದ ಮಿಖೈಲ್‌ ಕುಕುಶಿನ್‌ ಅವರನ್ನು 7-6 (6), 7-5 ಅಂಕಗಳಿಂದ ಹಿಮ್ಮೆಟ್ಟಿಸಿದರು. ಬೋಪಣ್ಣ-ಕುರೇಶಿ ಕಳೆದ ವರ್ಷದ ಯುಎಸ್‌ ಓಪನ್‌ನಲ್ಲಿ ಇದೇ ಜೋಡಿಗೆ ಶರಣಾಗಿದ್ದು, ಈ ಸಲ ಸೇಡು ತೀರಿಸಿಕೊಳ್ಳಬಹುದೇ ಎಂಬ ಕುತೂಹಲ ಮೂಡಿದೆ.

ಸದ್ಯ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಉಳಿದುಕೊಂಡಿರುವ ಭಾರತದ ಕೊನೆಯ ಸ್ಪರ್ಧಿ. ಪೇಸ್‌-ಭೂಪತಿ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲುಂಡು ನಿರ್ಗಮಿಸಿದ್ದರು.

English summary
Sania Mirza in company with Elena Vesnina has reached French Open's semi-finals. This is the highest ever achievement for the lady herself and for Indian ladies in general. Another Indian Rohan Bopanna and his Pak partner Aisam-ul-haq Qureshi advanced to the French Open men's doubles quarterfinals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X