ಐಟಿ ಬಿಟಿ ಕಂಪೆನಿಗಳಿಗೆ ಮತ್ತೆ ಉಗ್ರರ ಭೀತಿ: ಅಶೋಕ್

ಮೈಸೂರಿನ ಜೆ.ಕೆ.ಮೈದಾನದಲ್ಲಿ ಭಾನುವಾರ ನಡೆದ ಸಾರಿಗೆ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದ ಅಶೋಕ್ ಈ ವಿಷಯ ತಿಳಿಸಿದರು. ಹೊರ ರಾಜ್ಯಗಳಿಂದ ಉಗ್ರರು ನುಸುಳುವುದನ್ನು ತಡೆಯಲು ಈಗಾಗಲೇ ರಾಜ್ಯದ ಕಡಲ ತೀರಗಳಲ್ಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಕಮಾಂಡೋ ಪಡೆ ನಿಯೋಜಿಸಲಾ ಗುವುದು ಎಂದರು.
ವಾಯುದಳ, ನೌಕಾದಳ ಹಾಗೂ ಭೂ ಸೇನೆಯ ವಿಶೇಷ ಪಡೆಗಳು ಕರ್ನಾಟಕ ಸೇರಿದಂತೆ ದೇಶದ ವಿವಿಧ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಸುಮಾರು 80 ಸಿಬ್ಬಂದಿ ಒಳಗೊಂಡ ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ದಳ) ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. 300 ಸಿಬ್ಬಂದಿಯವರೆಗೆ ಕಮಾಂಡೋ ಪಡೆ ವಿಸ್ತರಿಸಲು ಮನವಿ ಸಲ್ಲಿಸಲಾಗಿದೆ ಎಂದರು.
ಐಟಿ ಬಿಟಿ ಕಂಪೆನಿಗಳು ಸೇರಿದಂತೆ ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ರಕ್ಷಿಸಲು ಪ್ರಪ್ರಥಮ ಬಾರಿಗೆ 20 ಕೋಟಿ ರೂ. ವೆಚ್ಚದಲ್ಲಿ 'ಇಂಡಸ್ಟ್ರೀಯಲ್ ಪಡೆ" ರೂಪಿಸಲು ಚಿಂತಿಸಲಾಗಿದೆ. ಇದರ ಜೊತೆಗೆ ಬೆಂಗಳೂರಿನ ಸಮೀಪದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಎನ್‌ಎಸ್‌ಜಿ ವಿಶೇಷ ತರಬೇತಿ ಕೇಂದ್ರ ಸ್ಥಾಪಿಸಲು ಕಾರ್ಯಯೋಜನೆ ರೂಪುಗೊಳ್ಳುತ್ತಿದೆ ಎಂದು ಅಶೋಕ್ ಹೇಳಿದರು.












Click it and Unblock the Notifications