ಸದ್ಯದಲ್ಲೇ ಭಾರಿ ಹಗರಣದ ಸುಳಿಗೆ ಒಬಾಮಾ: ಭವಿಷ್ಯ

Barack Obama
ಲಂಡನ್, ಮೇ 30: ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಸದ್ಯದಲ್ಲಿಯೇ ಭಾರಿ ಹಗರಣದ ಆರೋಪವನ್ನು ಎದುರಿಸಲಿದ್ದಾರೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕರೊಬ್ಬರು ಭವಿಷ್ಯ ಹೇಳಿದ್ದಾರೆ.

ತನ್ನ ಗಣಿತ ಸಿದ್ಧಾಂತಗಳ ಆಧಾರದಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ (ಸೆಂಟರ್ ಫಾರ್ ಪಾಲಿಟಿಕ್ಸ್‌) ಅಧ್ಯಕ್ಷ ಒಬಾಮಾ ಆಡಳಿತವು ಸದ್ಯದಲ್ಲೇ ಭಾರಿ ವಿವಾದವೊಂದಕ್ಕೆ ಸಿಲುಕಲಿದೆ ಎಂದು ಮಿಚಿಗನ್‌ ವಿಶ್ವವಿದ್ಯಾನಿಲಯದ ಬ್ರೆಂಡನ್‌ ನೈಹಾನ್‌ ಹೇಳಿದ್ದಾರೆ.

2012ರ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ದೇಶದ ಪ್ರಥಮ ಕಪ್ಪುವರ್ಣೀಯ ಅಧ್ಯಕ್ಷ ಒಬಾಮಾ ವಿರುದ್ಧ ಹಗರಣ ಆರೋಪ ಕೇಳಿಬರಲಿದೆ. ಮುಂದಿನ ವರ್ಷದ ಜೂನ್‌ ವೇಳೆಗೆ ಒಬಾಮಾ ವಿವಾದಾಸ್ಪದ ವ್ಯಕ್ತಿಯಾಗುವುದು ಬಹುತೇಕ ಖಚಿತ ಎಂದು ಡೈಲಿ ಮೇಲ್‌ ವರದಿ ಮಾಡಿದೆ.

ಒಬಾಮಾ ಆಡಳಿತಕ್ಕೆ ರಿಪಬ್ಲಿಕನ್ನರಿಂದ ಬೆಂಬಲ ಕೊರತೆ ಹಾಗೂ ರೊನಾಲ್ಡ್‌ ರೇಗನ್‌ ಹಾಗೂ ಬಿಲ್‌ ಕ್ಲಿಂಟನ್‌ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿಸಲಾಗಿದೆ. ಒಬಾಮಾ ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಾಗಲೇ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಅನುಚಿತ ವರ್ತನೆಯ ಆಪಾದನೆಗೆ ವಿರೋಧಪಕ್ಷದ ಸಂಸದರು ಈಗಾಗಲೇ ತಯಾರಿ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+