ಶನಿವಾರ ಬೆಂಗಳೂರಿನಲ್ಲಿ ಭ್ರಷ್ಟಾಚಾರಕ್ಕೆ ನಿಷೇಧ

ಭಾರತಕ್ಕೆ ಲೋಕ್ ಪಾಲ್ ಮಸೂದೆ ಲಭಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದು ನೂರಾರು ಕೋಟಿ ಭಾರತೀಯರ ಪರವಾಗಿ ಇತ್ತೀಚೆಗಷ್ಟೇ ಉಪವಾಸ ಕೈಗೊಂಡಿದ್ದ ಹಿರಿಯಣ್ಣ ಅಣ್ಣಾ ಅವರು ಮೇ 28ರಂದು ಮಧ್ಯಾಹ್ನ 2 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಣ್ಣಾ ಬೆಂಗಳೂರು ಭೇಟಿಯು ರಾಜ್ಯದಲ್ಲಿ ಈಗಾಗಲೇ ವ್ಯಾಪಕ ಸಂಚಲವನ್ನುಂಟುಮಾಡಿದೆ. ನಾನಾ ಜಿಲ್ಲೆಗಳಿಂದ ಸಾವಿರಾರು ಮಂದಿ ಅಣ್ಣಾ ಭೇಟಿಗಾಗಿ ಶನಿವಾರ ಬಸವನಗುಡಿ ನ್ಯಾಷನಲ್ ಕಾಲೇಜಿನತ್ತ ಹೆಜ್ಜೆಹಾಕಲಿದ್ದಾರೆ.
ಇದೇ ವೇಳೆ, ಅಣ್ಣಾ ಕಾರ್ಯಕ್ರಮಕ್ಕೆ ಅನೇಕ ಮಂದಿ ದೇಣಿಗೆ ನೀಡತೊಡಗಿದ್ದಾರೆ. ಕಾರ್ಯಕ್ರಮಕ್ಕೆ ಸುಮಾರು 5 ಲಕ್ಷ ರುಪಾಯಿ ವೆಚ್ಚವಾಗುವ ಅಂದಾಜಿದೆ. ಖ್ಯಾತ ವೈದ್ಯ ಡಾ. ಬಿ. ರಮಣ ರಾವ್, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್. ದೊರಸ್ವಾಮಿ, ಎಸ್.ಆರ್. ರಾಮಯ್ಯ, ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ತಂದೆ ಸೇರಿದಂತೆ ಅನೇಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. [ಲೇಖನ : ಬದಲಾವಣೆ ಬೇಕಾ? ಮೊದಲು ನೀವು ಬದಲಾಗಿ]












Click it and Unblock the Notifications