'ಕೈ'ಹಿಡಿಯದ ಕೇಂದ್ರ : ರಾಜ್ಯ ಕಾಂಗ್ರೆಸ್ ಕಂಗಾಲು

ಯಡಿಯೂರಪ್ಪ ಸರಕಾರ ಪತನಕ್ಕೆ ಪಣತೊಟ್ಟು ದೆಹಲಿ ಯಾತ್ರೆ ಕೈಗೊಂಡಿದ್ದ ರಾಜ್ಯ ಕಾಂಗ್ರೆಸ್ಸಿಗರಿಗೆ ಕೇಂದ್ರದ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಸಮಿತಿ (ಸಿಸಿಪಿಎ) ಭಾನುವಾರ ಕೈಗೊಂಡಿರುವ ತೀರ್ಮಾನ ಮರ್ಮಾಘಾತ ನೀಡಿದೆ.
ಗೃಹ ಸಚಿವ ಚಿದಂಬರಂ ಈ ಇಡೀ ಬೆಳವಣಿಗೆಗಳ ಹಿಂದಿನ ಖಳನಾಯಕ ಎಂಬ ಆಕ್ರೋಶ ಕಾಂಗ್ರೆಸ್ಸಿಗರಲ್ಲಿ ಮನೆಮಾಡಿದೆ. ಆದರೆ ಕೇಂದ್ರ ನಾಯಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರಿಯದೇ ಆತುರದಲ್ಲಿ ರಾಜ್ಯಪಾಲ ಭಾರದ್ವಾಜ್ ಅವರ ತಾಳಕ್ಕೆ ಕುಣಿದು ಈ ರೀತಿಯ ಮುಖಭಂಗ ಅನುಭವಿಸಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.
ಕುತೂಹಲದ ವಿಷಯವೆಂದರೆ ಕೇಂದ್ರ ನಾಯಕರ ಒಪ್ಪಿಗೆ ಪಡೆದೇ ಶಿಫಾರಸು ಸಾಹಸಕ್ಕೆ ಕೈ ಹಾಕಿರುವೆ ಎಂದು ರಾಜ್ಯಪಾಲರು ಕಾಂಗ್ರೆಸ್ ನಾಯಕರ ಮುಂದೆ ಬೂಸಿ ಬಿಟ್ಟಿದ್ದರು. ಒಂದಿಷ್ಟೂ ಸಂಶಯವಿಲ್ಲದೆ ರಾಜ್ಯ ಕಾಂಗ್ರೆಸ್ಸಿಗರು ಇದನ್ನು ನಂಬಿರುವುದ ಸ್ಪಷ್ಟ. ಹಾಗಾಗಿಯೇ ನಿದ್ದೆಯಿಂದ ಎಚ್ಚೆತ್ತವರಂತೆ ಇವರು ಅತಿ ಉತ್ಸಾಹದಿಂದ ಹೋರಾಟ ಪ್ರತಿಭಟನೆಗಳನ್ನು ಆರಂಭಿಸಿದ್ದು.












Click it and Unblock the Notifications