ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ನಂದಿಕ್ಷೇತ್ರದಲ್ಲಿ ಸತಿಪತಿಗಳಾದ ವಿದೇಶಿಗರು

By * ಬಿಎಂ ಲವಕುಮಾರ್, ಮೈಸೂರು
|
Google Oneindia Kannada News

Foreign lovers marry in Mysore
ಮೈಸೂರು, ಮೇ. 18 : ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿ ಪ್ರೇಮಿಗಳಿಬ್ಬರು ಚಾಮುಂಡಿಬೆಟ್ಟದ ನಂದಿಕ್ಷೇತ್ರದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೂಲತಃ ಇಂಗ್ಲೆಂಡ್‌ನ ಮ್ಯಾಥ್ಯೂರ್‍ಯಾನ್ ಹಾಗೂ ಸ್ವೀಡನ್‌ನ ಲೀನಾ ಎಂಬಿಬ್ಬರು ಪ್ರೇಮಿಗಳೇ ಹಿಂದೂ ಸಂಪ್ರದಾಯದಂತೆ ವಿವಾಹವಾದವರು.

ಯೋಗ ಟೀಚರ್ ಆಗಿರುವ ಮ್ಯಾಥ್ಯೂರ್‍ಯಾನ್ ಹಾಗೂ ಹೇರ್‌ಡ್ರೆಸರ್ ಲೀನಾ ಈ ಹಿಂದೆಯೇ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆಗಾಗ್ಗೆ ಭಾರತಕ್ಕೆ ಪ್ರವಾಸ ಬರುತ್ತಿದ್ದ ಮ್ಯಾಥ್ಯೂರ್‍ಯಾನ್ ಇಲ್ಲಿನ ಸಂಸ್ಕೃತಿಗೆ ಮಾರುಹೋಗಿದ್ದರು. ಅಲ್ಲದೆ, ಹಿಂದೂ ಸಂಪ್ರದಾಯದಂತೆ ವಿವಾಹವಾಗುವ ಬಯಕೆ ಅವರದ್ದಾಗಿತ್ತು. ಈ ಬಾರಿ ಪ್ರೇಯಸಿ ಸ್ವೀಡನ್‌ನ ಲೀನಾಳೊಂದಿಗೆ ಭಾರತಕ್ಕೆ ಬಂದಿದ್ದ ಅವರು ಪಟ್ಟಾಭಿ ಜೋಯಿಷ್ ಅವರನ್ನು ಭೇಟಿಯಾಗಿದ್ದರಲ್ಲದೆ, ತಮ್ಮ ಬಯಕೆಯನ್ನು ಹೇಳಿಕೊಂಡಿದ್ದರು ಅದರಂತೆ ಚಾಮುಂಡಿಬೆಟ್ಟದ ನಂದಿಕ್ಷೇತ್ರದಲ್ಲಿ ಪ್ರೇಮಿಗಳಿಬ್ಬರಿಗೆ ಜಮುನಾಗಿರಿ ಬೆಟ್ಟದ ಬಳಗವು ವಿವಾಹವನ್ನು ಏರ್ಪಡಿಸಿತ್ತು.

ಓದಲು ಮರೆಯದಿರಿ : ಈ ವಿದೇಶಿಯನ್ನು ನೋಡಿಯಾದರೂ ಕನ್ನಡ ಮಾತಾಡಿ

ಚಂದ್ರಶೇಖರ್ ನೇತೃತ್ವದ ಐವರ ತಂಡ ಪೌರೋಹಿತ್ಯವನ್ನು ವಹಿಸಿದ್ದರು. ಬುಧವಾರ ಬೆಳಿಗ್ಗೆ 8 ರಿಂದ 11.15ರವರೆಗೆ ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ ವಿವಾಹಕಾರ್ಯ ನಡೆದು ಮ್ಯಾಥ್ಯೂರ್‍ಯಾನ್ ಹಾಗೂ ಲೀನಾ ಹೂವಿನ ಹಾರ ಬದಲಾಯಿಸಿಕೊಳ್ಳುವ ಮೂಲಕ ಸತಿಪತಿಗಳಾದರು. ಈ ಸಂದರ್ಭ ನಂದಿಕ್ಷೇತ್ರದ ಶಿವಗುಹಾಲಯದ ಸ್ವಾಮೀಜಿ ಇನ್ನಿತರರು ಹಾಜರಿದ್ದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ವಿದೇಶಿ ಜೋಡಿಗೆ ಶುಭವಾಗಲಿ.

English summary
Nandi kshetra in Chamundi hills in Mysore witnesses two foreign lovers marrying according to Hindu rituals. Lovers from England and Sweeden frequently visited India and were blown away by the beauty of indian tradition and wanted to marry according to hindu tradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X