ಕಡಪದಲ್ಲಿ ವೈಎಸ್‌ಆರ್ ಪುತ್ರ, ಪತ್ನಿಯ ಕಮಾಲ್
ಕಡಪ,
ಮೇ.13: ಕಡಪ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೈಎಸ್ ಜಗನ್ ಮೋಹನ್ ರೆಡ್ಡಿ ಜಯಭೇರಿಯತ್ತ ಮುನ್ನುಗ್ಗಿದ್ದಾರೆ. ಜಗನ್ ಅವರ ತಾಯಿ ವಿಜಯಲಕ್ಷ್ಮಿ ಅವರು ಪುಲಿವೆಂದುಲ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. id="toptextpromo">ತಮ್ಮ
ಸಮೀಪದ ಪ್ರತಿಸ್ಪರ್ಧಿ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಎಂ ವಿ ಮೈಸೂರಾ ರೆಡ್ಡಿ ಅವರನ್ನು ಜಗನ್ 2, 22000 ಮತಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ವಿಜಯಲಕ್ಷ್ಮಿ ಅವರು ಕಾಂಗ್ರೆಸ್‌ನ ವೈಎಸ್ ವಿವೇಕಾನಂದ ರೆಡ್ಡಿ ಅವರಿಂದ 33,767 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮೇ
8ರಂದು ತಮ್ಮ ಸ್ಥಾನಕ್ಕೆ ಜಗನ್ ರಾಜೀನಾಮೆ ನೀಡಿದ ಕಾರಣ ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಬಳಿಕ ವೈ ಎಸ್ ಜಗನ್ ಸ್ವತಂತ್ರ ಪಕ್ಷವನ್ನು ಕಟ್ಟಿದ್ದರು. ಇದೇ ಮೊದಲ ಬಾರಿಗೆ ಜಗನ್ ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದಾರೆ. (ಏಜೆನ್ಸೀಸ್)











Click it and Unblock the Notifications