ಕುದ್ರೋಳಿ ಗಣೇಶ್ ಮ್ಯಾಜಿಕ್: ತುಳು ಸಿಡಿ ಹರಾಜು!
ಮಂಗಳೂರು.
ಮೇ 10: ನೂತನ "ಒರಿಯೊರ್ದೊರಿ ಅಸಲ್" ತುಳು ಸಿನಿಮಾದ ಮೊದಲ ಸಿಡಿ ಸುಮಾರು 18 ಸಾವಿರ ರೂಪಾಯಿಗೆ ಹರಾಜುಗೊಂಡಿದೆ. ನಗರದ ಕೆ. ಎಸ್. ರಸ್ತೆಯ ಮಾಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಮಾಲಡಿ ಬಾಲಕೃಷ್ಣ ಶೆಟ್ಟಿ ಮೊದಲ ಸಿಡಿಯನ್ನು ಹರಾಜಿನಲ್ಲಿ ತನ್ನದಾಗಿಸಿಕೊಂಡರು. id="toptextpromo">ಈ
ಸಿಡಿಯನ್ನು ಕುದ್ರೋಳಿ ಗಣೇಶ್ ಅವರು ಮ್ಯಾಜಿಕ್ ಟ್ರಿಕ್ ಮೂಲಕ ಬಿಡುಗಡೆ ಮಾಡಿದರು. ಕುದ್ರೋಳಿ ಗಣೇಶ್ ಅವರು ಹೂವಿನ ಎಸಳು ಮತ್ತು ಖಾಲಿ ಬಾಕ್ಸ್ ಗಳನ್ನು ಪ್ರೇಕ್ಷಕರಿಗೆ ವಿತರಿಸಿದರು. ಮತ್ತೆ ಖಾಲಿ ಬಾಕ್ಸ್ ಗೆ ಹೂವಿನ ಎಸಲು ತುಂಬಿಸಲು ಎಲ್ಲರಲ್ಲೂ ಹೇಳಿದರು. ಜನರು ಅದೇ ರೀತಿ ಮಾಡಿದರು. ಮತ್ತೆ ಆ ಬಾಕ್ಸ್ ನೋಡಿದಾಗ ಹೂವಿನ ಎಸಳುಗಳೆಲ್ಲ ಹಲವು ಸಿಡಿಗಳಾಗಿದ್ದವು. id='are-slot-1' class='oiad oi-axt oiadv'> id='top-searched-articles'>ಸುಮಾರು
23 ವರ್ಷದ ಹಿಂದೆ ಒರಿಯೊರ್ದೊರಿ ಅಸಲ್ ನಾಟಕಕ್ಕೆ ಸಂಭಾಷಣೆಯನ್ನ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಬರೆದಿದ್ದರು. ಅದೇ ನಾಟಕ ಈಗ ಸಿನಿಮಾವಾಗಿದೆ. ಒರಿಯೊರ್ದೊರಿ ಅಸಲ್ ಚಿತ್ರಗೀತೆಗಳಿಗೆ ಕೋಕಿಲಾ ಖ್ಯಾತಿಯ ಎ. ಕೆ. ವಿಜಯ್ ಸಂಕಲನ ಮಾಡಿದ್ದಾರೆ. ರಾಜ್ ಶೇಖರ್ ಎಂಬವರು ನಿರ್ದೇಶಿಸಿದ್ದಾರೆ.











Click it and Unblock the Notifications