ಬೆಂಗಳೂರು ಮಂಗಳಮುಖಿಯಿಂದ 50 ಲಕ್ಷ ರು. ದರೊಡೆ
ಪಂಚಕುಳ,
ಮೇ. 04 : ಪಿಸ್ತೂಲು, ಖಡ್ಗ, ಬೇಸ್ ಬಾಲ್ ಬ್ಯಾಟ್ ಮತ್ತು ಹಾಕಿ ಸ್ಟಿಕ್ ಹಿಡಿದಿದ್ದ 12 ದರೊಡೆಕೋರರ ತಂಡ 10 ಮಂಗಳಮುಖಿಯರಿಂದ 50 ಲಕ್ಷ ರು. ನಗದು ಮತ್ತು 800 ಗ್ರಾಂ ಚಿನ್ನವನ್ನು ದರೊಡೆ ಮಾಡಿದ ಘಟನೆ ಹರ್ಯಾಣಾದ ಪಂಚಕುಳ ಜಿಲ್ಲೆಯ ಕಲ್ಕ ಎಂಬಲ್ಲಿ ನಡೆದಿದೆ. ಈ ಮಂಗಳಮುಖಿಯರ ತಂಡದ ನಾಯಕಿ ಸ್ವೀಟಿ ಬೆಂಗಳೂರಿನಿಂದ ಆಗಷ್ಟೇ ವಾಪಸ್ ಬಂದಾಗ ಈ ಘಟನೆ ನಡೆದಿದೆ. id="toptextpromo">ಮುಖವಾಡ
ತೊಟ್ಟುಕೊಂಡಿದ್ದ ದರೊಡೆಕೋರರ ತಂಡ ಎಂಟಡಿ ಎತ್ತರದ ಕಾಂಪೌಂಡ್ ಗೋಡೆಯನ್ನು ಹತ್ತಿ ಎರಡಂತಸ್ತಿನ ಮನೆಯನ್ನು ಪ್ರವೇಶಿಸಿದ್ದಾರೆ. ಮಂಗಳಮುಖಿಯರನ್ನು ಒಂದು ಕೋಣೆಯಲ್ಲಿ 1 ಗಂಟೆ ಕಾಲ ಕೂಡಿಹಾಕಿ ಬ್ಯಾಂಕ್ ಲಾಕರಲ್ಲಿ ಇಡಬೇಕಾಗಿದ್ದ ನಗದು ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದ್ದರೂ, ಬೆಂಗಳೂರಿನ ಸ್ವೀಟಿ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಬಗ್ಗೆ ದೂರು ದಾಖಲಿಸಲಾಗಿದ್ದು, ಪಂಚಕುಳ ಎಸ್ ಪಿ ಮನೀಶ್ ಚೌಧರಿ ಎಲ್ಲ ಮಂಗಳಮುಖಿಯರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ದಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಹಿಜಡಾಗಳ ಬಳಿ ಇಷ್ಟೊಂದು ಹಣ ಮತ್ತು ಆಭರಣಗಳು ಎಲ್ಲಿಂದ ಬಂತು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಏ.6 ಅಕ್ಷಯ ತೃತೀಯಾ. ಚಿನ್ನ ಕೊಳ್ಳಲು ಶುಭಸಮಯ. ಇಂಥ ಸಮಯದಲ್ಲೇ ದರೊಡೆಕೋರರು ಚಿನ್ನದ ಲೂಟಿ ಹೊಡೆದಿದ್ದಾರೆ.











Click it and Unblock the Notifications