ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಕೋಟಿ ರೂ. ಬಹುಮಾನ ಬೇಡವೆಂದ ಅಣ್ಣಾ

|
Google Oneindia Kannada News

Anna Hazare
ದೆಹಲಿ, ಮೇ 5: ಸುಮಾರು ಒಂದು ಕೋಟಿ ರೂ. ನಗದು ಬಹುಮಾನವಿರುವ ಪ್ರಶಸ್ತಿಯೊಂದನ್ನು ಅಣ್ಣಾ ಹಜಾರೆಯವರು ನಿರಾಕರಿಸಿದ್ದಾರೆ. ದೆಹಲಿಯ ಐಐಪಿಎಂ ಸಂಸ್ಥೆಯು ಪ್ರಸಕ್ತ ವರ್ಷದ ರವೀಂದ್ರನಾಥ್ ಶಾಂತಿ ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ಯ ಮತ್ತು ಲೋಕಪಾಲ ಮಸೂದೆಗಾಗಿ ಹೋರಾಡಿದ ಅಣ್ಣಾ ಹಜಾರೆ ಅವರಿಗೆ ನೀಡಲು ನಿರ್ಧರಿಸಿತ್ತು.

"ದೆಹಲಿಯ ಸಂಸ್ಥೆಯೊಂದು ನನಗೆ ಈ ಪ್ರಶಸ್ತಿಯನ್ನು ನೀಡುವುದಾಗಿ ಪ್ರಕಟಿಸಿದೆ. ಆದರೆ ಅದನ್ನು ನಾನು ಬೇಡ ಎಂದಿದ್ದೇನೆ" ಎಂದು ಅಣ್ಣಾ ಹಜಾರೆ ಹೇಳಿದ್ದಾರೆ. ಆದರೆ ನಿರಾಕರಿಸಲು ಕಾರಣವೇನೆಂದು ಅವರು ತಿಳಿಸಿಲ್ಲ. "ಯಾಕೆ ನಿರಾಕರಿಸಿದ್ದೇನೆ ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ನನ್ನ ಮನಸ್ಸು ಈ ಪ್ರಶಸ್ತಿ ಬೇಡವೆಂದಿತ್ತು" ಎಂದು ಅಣ್ಣಾ ಹಜಾರೆಯವರು ಹೇಳಿದ್ದಾರೆ.

ಈ ಪ್ರಶಸ್ತಿಯು ಒಂದು ಕೋಟಿ ರೂಪಾಯಿ ನಗದು ಮತ್ತು ಒಂದು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಹೊಂದಿರುತ್ತದೆ. ಪ್ರಸಕ್ತ ವರ್ಷದ ರವಿಂದ್ರನಾಥ್ ಶಾಂತಿ ಪ್ರಶಸ್ತಿಯನ್ನು ಭ್ರಷ್ಟಾಚಾರದ ವಿರುದ್ಧ ಶಾಂತಿಯುತ ಹೋರಾಟ ನಡೆಸಿದ ಅಣ್ಣಾ ಹಜಾರೆಯವರಿಗೆ ನೀಡಲಾಗುತ್ತಿದೆ" ಎಂದು ಇಂಡಿಯನ್ ಇನ್ಸೂಟ್ಯೂಟ್ ಆಫ್ ಪ್ಲಾನಿಂಗ್ ಆಂಡ್ ಮ್ಯಾನೇಜ್ ಮೆಂಟ್ ಮುಖ್ಯಸ್ಥ ಅರಿದಂ ಚೌಧರಿ ಪ್ರಕಟಿಸಿದ್ದರು.

English summary
Social activist Anna Hazare, whose fast for a stronger anti-corruption Lok Pal Bill last month made global headlines, has spurned the Rs one crore 2011 Rabindranath Tagore Peace Prize announced by the Indian Institute of Planning and Management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X