ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಡೆನ್ ಪೋಸ್ಟ್ ಮಾರ್ಟಮ್ ಚಿತ್ರ ಬಿಡುಗಡೆ ಜಿಜ್ಞಾಸೆ ಅಂತ್ಯ

|
Google Oneindia Kannada News

Osama Bin Laden
ವಾಷಿಂಗ್ಟನ್, ಮೇ 4: ಕೊನೆಗೂ ಇಡೀ ಜಗತ್ತು ಕಾಯುತ್ತಿದ್ದ ಲಾಡೆನ್ ಹತ್ಯೆಯ ಚಿತ್ರವನ್ನು ಪ್ರಕಟಿಸಲು ಅಮೆರಿಕದ ಸಿಐಎ ನಿರ್ಧರಿಸಿದೆ. ಇದರೊಂದಿಗೆ ಆತನ ಸಾವಿನ ಫೋಟೊ ಪ್ರಕಟಿಸಬೇಕೇ? ಬೇಡವೇ? ಎಂಬ ಜಿಜ್ಞಾಸೆಯು ಕೊನೆಯಾಗಿದೆ.

"ಕಿಲ್ ಒಸಾಮಾ' ಕಾರ್ಯಚರಣೆ ಮೂಲಕ ಅಂತ್ಯಗೊಂಡ ಲಾಡೆನ್ ಮೃತದೇಹದ ಫೋಟೊ ಯಾಕೆ ಪ್ರಕಟಿಸಬಾರದು ಎಂಬ ಪ್ರಶ್ನೆ ಸಹಜ. ಈ ಕುರಿತು ಸಿಐಎ ಮುಖ್ಯಸ್ಥ ನಿನ್ನೆ ಎನ್ ಬಿಸಿ ನ್ಯೂಸ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ "ಆತನ ಅಂತ್ಯದ ಫೋಟೊ ಬರ್ಬರತೆಯಿಂದ ಕೂಡಿರುವುದರಿಂದ ಸಾರ್ವಜನಿಕವಾಗಿ ಪ್ರಕಟಿಸುವುದು ಸಾಧುವಲ್ಲ" ಎಂದು ಅಭಿಪ್ರಾಯಪಟ್ಟಿದ್ದರು. "ಆತನ ಫೋಸ್ಟ್ ಮಾರ್ಟಮ್ ಚಿತ್ರ ಪ್ರಕಟಿಸಬೇಕೆ ಬೇಡವೇ ಎಂಬುದರ ಕುರಿತು ಇನ್ನೂ ನಿರ್ಧರಿಸಲಾಗಿಲ್ಲ" ಎಂದು ವೈಟ್ ಹೌಸ್ ವಕ್ತಾರರು ಕೂಡ ಹೇಳಿದ್ದರು.

ದಾಳಿಯಿಂದ ಲಾಡೆನ್ ಮುಖದ ಮತ್ತು ದೇಹದ ಭಾಗ ಸಾರ್ವಜನಿಕವಾಗಿ ಪ್ರಕಟಿಸದಷ್ಟು ಬರ್ಬರತೆಯಿಂದ ಕೂಡಿದೆ. ಹೀಗಾಗಿ ಇದನ್ನು ಪ್ರಕಟಿಸದಿರಲು ಸಿಐಎ ನಿರ್ಧರಿಸಿತ್ತು. ಆದರೆ ಆತನ ಅಂತ್ಯದ ಚಿತ್ರವನ್ನು ನೋಡಲು, ಸ್ಪಷ್ಟಪಡಿಸಿಕೊಳ್ಳಲು ಇಡೀ ಜಗತ್ತು ಕಾಯುತ್ತಿದೆ. ಹೀಗಾಗಿ ಪ್ರಕಟಿಸಲೇಬೇಕೆಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಈಗ ಎಲ್ಲಾ ಜಿಜ್ಞಾಸೆಗಳಿಗೆ ಸಿಐಎ ಕೊನೆ ಹಾಡಿ ಫೋಟೊ ಪ್ರಕಟಿಸುವುದಾಗಿ ಹೇಳಿದೆ.

ಆದರೂ ಒಂದು ಸಂದೇಹ ಕಾಡಬಹುದು. ಆತ ಸತ್ತಾಗ ಟೆಲಿವಿಷನ್, ಆನ್ ಲೈನ್ ನಲ್ಲಿ ಹರಿದಾಡಿದ ಆ ಎಡಗಣ್ಣು ಚಿಂದಿಯಾಗಿರುವ ಫೋಟೊವನ್ನು ಯಾರು? ಯಾವಾಗ? ಬಿಡುಗಡೆ ಮಾಡಿದ್ದಾರೆ ಅಂತ. ಅದು ಕೃತಕವಾಗಿ ಸೃಷ್ಟಿಸಿದ ಚಿತ್ರ ಎಂದು ಈಗಾಗಲೇ ಸಾಬೀತಾಗಿದೆ.

English summary
After intense media speculation and conspiracy theories that emerged following the non-availability of pictures of slain al Qaeda leader Osama Bin Laden's corpse, the US has finally decided to break its silence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X