ವೈಎಸ್‌ಆರ್ ಶೈಲಿಯಲ್ಲಿಅರುಣಾಚಲ ಸಿಎಂ ನಾಪತ್ತೆ
ಇಟಾನಗರ,
ಮೇ.1: ಅರುಣಾಚಲ ಪ್ರದೇಶದ ಸಿಎಂ ದೋರ್ಜಿ ಖಂಡು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದ್ದು 24 ಗಂಟೆ ಕಳೆದರೂ ಇನ್ನೂ ಸುಳಿವು ಸಿಕ್ಕಿಲ್ಲ. ಈ ಘಟನೆಯು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಹೆಲಿಕಾಪ್ಟರ್ ನಾಪತ್ತೆ ಪ್ರಕರಣವನ್ನು ನೆನಪಿಸುತ್ತಿದೆ. ಹವಾಮಾನ ವೈಫರೀತ್ಯದಿಂದ ಶೋಧ ಕಾರ್ಯಕ್ಕೂ ಅಡ್ಡಿಯುಂಟಾಗಿದೆ. 30 ಸೇನಾ ತುಕಡಿಗಳಿಂದ ಶೋಧ ಕಾರ್ಯಾಚರಣೆ ಮುಂದುವರಿದಿದೆ. id="toptextpromo">ಶನಿವಾರ
ಬೆಳಗ್ಗೆ 9.56ಕ್ಕೆ ತವಾಂಗ್ ಬಿಟ್ಟ ಖಂಡು ಪ್ರಯಾಣಿಸುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ 11.30ಕ್ಕೆ ಇಟಾನಗರದಲ್ಲಿ ಲ್ಯಾಂಡ್ ಆಗಬೇಕಾಗಿತ್ತು. ಆದರೆ ತವಾಂಗ್ ಬಿಟ್ಟ 20 ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡ ಹೆಲಿಕಾಪ್ಟರ್ ಇದುವರೆಗೂ ಪತ್ತೆಯಾಗಿಲ್ಲ. ಮತ್ತೊಂದೆಡೆ ಖಂಡು ಅವರು ಸುರಕ್ಷಿತವಾಗಿದ್ದಾರಾ ಎಂಬ ಆತಂಕ ವ್ಯಕ್ತವಾಗಿದೆ. id='are-slot-1' class='oiad oi-axt oiadv'> id='top-searched-articles'>ಆಂಧ್ರಪ್ರದೇಶದ
ಮುಖ್ಯಮಂತ್ರಿ ವೈಎಸ್‌ಆರ್ ಅವರ ದುರಂತ ಅಂತ್ಯ ಇನ್ನೂ ಕಣ್ಮುಂದೆ ಇರಬೇಕಾದರೆ ಖಂಡು ನಾಪತ್ತೆಯಾಗಿರುವುದು ತೀವ್ರ ದುಗುಡಕ್ಕೆ ಎಡೆ ಮಾಡಿಕೊಟ್ಟಿದೆ. ಕಾಪ್ಟರ್‌ನಲ್ಲಿ ಸಿಎಂ ದೋರ್ಜಿ ಖಂಡು, ಅವರ ಸಹೋದರಿ ಹಾಗೂ ತವಾಂಗ್ ಶಾಸಕಿ ತ್ಸವೋಂಗ್ ಧೋಂಪಡ್, ಕ್ಯಾಪ್ಟನ್ ಜೆ ಎಸ್ ಬಬ್ಬರ್, ಕ್ಯಾಪ್ಟನ್ ಕೆ ಎಸ್ ಮಾಲಿಖ್, ಖಂಡು ಅವರ ಭದ್ರತಾಕಾರಿ ಯಶಿ ಛೋಂಡಕ್ ಮತ್ತು ಯೇಶಿ ಲಮು ಪ್ರಯಾಣಿಸುತ್ತಿದ್ದರು.











Click it and Unblock the Notifications