ಬೆಂಗಳೂರಿನ ನೂತನ ಮೇಯರ್ ಶಾರದಮ್ಮ, ಎಸ್ಎಸ್ಎಲ್ ಸಿ
ಬೆಂಗಳೂರು,
ಏಪ್ರಿಲ್ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಶೆಟ್ಟಿಹಳ್ಳಿಯ ಶಾರದಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಆಗಿ ಹರೀಶ್ ಆವರು ಆಯ್ಕೆಯಾಗಿದ್ದಾರೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಬಲಾಬಲದ ಕೊರತೆಯಿಂದಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹಿಂದೇಟು ಹಾಕಿತ್ತು. ಅದರಿಂದಾಗಿ ಎಸ್ಎಸ್ಎಲ್ ಸಿ ಪಾಸಾಗಿರುವ ಶಾರದಮ್ಮ ನಿರಾಯಾಸವಾಗಿ ನೇಮಕಗೊಂಡರು. id="toptextpromo">ಮೀಸಲಾತಿ
ಪ್ರಕಾರ ಈ ಬಾರಿ ಪರಿಶಿಷ್ಟ ಜಾತಿಯ ಮಹಿಳೆಯ ಆಯ್ಕೆಯಾಬೇಕಿತ್ತು. ಅದರಂತೆ ಆಡಳಿತಾರೂಢ ಬಿಜೆಪಿಯ ಶಾರದಮ್ಮ ಅವರು ಬೆಂಗಳೂರಿಗೆ ಐದನೆಯ ಮಹಿಳಾ ಪುರಪಿತೃವಾಗಿ ಆಯ್ಕೆಯಾಗಿದ್ದಾರೆ. ಬಿಳೇಕಹಳ್ಳಿಯ ರೂಪಾ ರಮೇಶ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ
ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾರದಮ್ಮ ಅವರ ಮೇಲೆ ಕೃಪೆ ತೋರಿದ್ದರಿಂದ ರೂಪಾ ದೂರ ಸರಿದರು ಎನ್ನಲಾಗಿದೆ. ಇನ್ನು, ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ವರ್ಗಕ್ಕೆ (ಎ ಕೆಟಗರಿ) ಮೀಸಲಾಗಿತ್ತು. ಅದರಂತೆ ಹರೀಶ್ ಆಯ್ಕೆಯಾಗಿದ್ದಾರೆ.











Click it and Unblock the Notifications