ಶಾಸಕ ಸಂಗಮೇಶ್ ಬಂಧನ, ಆಸ್ಪತ್ರೆ ಪಾಲು
ಶಿವಮೊಗ್ಗ,
ಏಪ್ರಿಲ್ 28: ಭಧ್ರಾವತಿ ತಹಸೀಲ್ದಾರ್ ಅಭಿಜಿನ್ ಶೆಟ್ಟಿ ಮೇಲೆ ನಾಲ್ಕು ದಿನಗಳ ಹಿಂದೆ ಹಲ್ಲೆ ನಡೆಸಿದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರನ್ನು ಗುರುವಾರ ರಾತ್ರಿ 10 ಗಂಟೆಗೆ ಬಂಧಿಸಲಾಗಿದೆ. ಆ ಸಮಯದಲ್ಲಿ ಪೊಲೀಸರು ಮತ್ತು ಶಾಸಕರ ಬೆಂಬಲಿಗರ ಮಧ್ಯೆ ತೀವ್ರ ಘರ್ಷಣೆ ನಡೆದಿದೆ. ಪೊಲೀಸರು ಅಶ್ರುವಾಯು ಮತ್ತು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. id="toptextpromo">ಬಂಧನವಾದ
ಬಳಿಕ ಹಠಾತ್ತನೇ ತೀವ್ರ ಅನಾರೋಗ್ಯಕ್ಕೆ ಈಡಾದ ಶಾಸಕ ಸಂಗಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಅವರನ್ನಿಂದು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶಾಸಕರ
ಮನೆಯ ಬಾಗಿಲನ್ನು ಬಲವಂತವಾಗಿ ತೆಗೆಸಿ, ಪೊಲೀಸರು ಅವರನ್ನು ಬಂಧಿಸುವ ಪ್ರಮೇಯ ಏರ್ಪಟ್ಟಿತ್ತು. ಮನೆಯಲ್ಲೂ ಶಾಸಕರ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆದಿದೆ. ಆ ವೇಳೆ ಮನೆಯಲ್ಲಿದ್ದ ಪೀಠೋಪಕರಣ ಮತ್ತು ಗಾಜುಗಳು ಒಡೆದಿವೆ. ಪೊಲೀಸರು ಬೆಂಬಲಿಗರನ್ನು ಮನೆಯಿಂದ ಹೊರಹಾಕಿದ ಬಳಿಕವಷ್ಟೇ ಸಂಗಮೇಶ್ ಬಂಧನ ಸಾಧ್ಯವಾಗಿದೆ. ಇನ್ಸ್ ಪೆಕ್ಟರ್ ನಿತ್ಯಾನಂದ ನೇತೃತ್ವದಲ್ಲಿ ಸುಮಾರು 200 ಮಂದಿ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.ಏಪ್ರಿಲ್ 25ರಂದು ನಡೆದ ಎಪಿಎಂಸಿ ಚುನಾವಣೆ ವೇಳೆ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಅಭಿನವ್ ಮೇಲೆ ಸಂಗಮೇಶ್ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications