ಮಲ್ಲೇಶ್ವರದಲ್ಲಿ ಬಿಜೆಪಿಯ ನೂತನ ಆಶಾಸೌಧ
ಬೆಂಗಳೂರು:
ರಾಜ್ಯ ಬಿಜೆಪಿ ಪಕ್ಷದ ನೂತನ ರಾಜ್ಯ ಕಚೇರಿ ಕಟ್ಟಡ "ಜಗನಾಥ್ ಭವನ್" ಬೆಂಗಳೂರಿನ ಮಲ್ಲೇಶ್ವರಂನಲ್ಲಿ ತಲೆಯೆತ್ತಿ ನಿಂತಿದೆ. ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದ ಈ ಭವ್ಯವಾದ ಕಟ್ಟಡವನ್ನು ಬಿಜೆಪಿ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿಯವರು ಉದ್ಘಾಟಿಸಲಿದ್ದಾರೆ. id="toptextpromo">ಏಪ್ರಿಲ್
20 ಅಂದರೆ ನಾಡಿದ್ದು ಗುರುವಾರ ಪೂರ್ವಾಹ್ನ 11 ಗಂಟೆಗೆ ಎಲ್ ಕೆ ಅಡ್ವಾಣಿಯವರು ನೂತನ ಭವನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಹೊಂದಿರುವ ಧರ್ಮೇಂದ್ರ ಪ್ರಧಾನ್ ಭಾಗವಹಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹೊಸ
ಕಟ್ಟಡ ಮಲ್ಲೇಶ್ವರಂನಲ್ಲಿ ಎಲ್ಲಿ ಎಂದು ಹುಡುಕಾಡೋದು ಕಷ್ಟವಿಲ್ಲ. ಅಲ್ಲೇ 11ನೇ ಅಡ್ಡರಸ್ತೆಯ ಕಾಡು ಮಲ್ಲೇಶ್ವರ ದೇವಾಲಯದ ಸಮೀಪದಲ್ಲಿ ಐದು ಅಂತಸ್ತಿನ ನೂತನ ಭವ್ಯ ಬಿಜೆಪಿ ಕಟ್ಟಡ ಎದ್ದು ಕಾಣುತ್ತದೆ.











Click it and Unblock the Notifications