ಮುಂದೈತೆ ಬಾಬಾ ನಿಜವಾದ ಪವಾಡ !

ಬಾಬಾ ಅವರೇ ಹೇಳಿದ್ದಂತೆ ಇನ್ನೂ 10 ವರ್ಷ ಅವರು ಬದುಕಿರಬೇಕಿತ್ತು. ಅಂದರೆ ಇನ್ನೂ 10 ವರ್ಷಗಳ ಪವಾಡಗು ಬಾಕಿಯಿವೆ. ಆದ್ದರಿಂದ ತಮ್ಮ ಪುನರ್ಜನ್ಮಕ್ಕೂ ಮುನ್ನ ಬಾಕಿಯಿರುವ ಪವಾಡಗಳನ್ನು ಒಂದೊಂದಾಗಿ ಪೂರೈಸಲಿದ್ದಾರೆ. ಆನಂತರ ಪುನರ್ಜನ್ಮದಲ್ಲಿ ತಮ್ಮ ಪವಾಡಗಳನ್ನು ಮುಂದುವರಿಸಲಿದ್ದಾರೆ ಎಂಬುದು ಭಕ್ತರ ಬಲವಾದ ವಾದ.
ಸಾಯಿಬಾಬಾ ತಮ್ಮ ಉತ್ತರಾಧಿಕಾರಿ ಬಗ್ಗೆ ಕೊನೆವರೆಗೂ ಮೌನವಹಿಸಿದ್ದರು. ಏಕೆಂದರೆ ತಾವೇ ಪುನರ್ ಜನ್ಮತಾಳುವುದಾಗಿ ಹಿಂದೊಮ್ಮೆ ಘೋಷಿಸಿದ್ದರು. ತಮ್ಮ 96ನೇ ವಯಸ್ಸಿನಲ್ಲಿ ಪ್ರೇಮಸಾಯಿಯಾಗಿ ಪುನರ್ ಜನಿಸುವ ಮಾತು ನೀಡಿರುವುದು (ಸೆಪ್ಟೆಂಬರ್ 9, 1960) ಬಾಬಾ ಭಕ್ತರಿಗೆ ಸಂಜೀವಿನಿಯಾಗಿದೆ. ಜೀಸಸ್ ಕ್ರಿಸ್ಟ ಪುನರ್ಜನ್ಮ ಪಡೆದಂತೆ ಬಾಬಾ ಸಹ ನಾಳಿದ್ದು ಬುಧವಾರ ಅವರ ಪಾರ್ಥಿವ ಶರೀರ ಮಣ್ಣಿನಲ್ಲಿ ಲೀನವಾಗುತ್ತಿದ್ದಂತೆ ಮತ್ತೆ ಹುಟ್ಟಿಬರಲಿದ್ದಾರೆ ಎಂದು ನಂಬಿದ್ದಾರೆ.
ಅಲ್ಲಿಯವರೆಗೂ ಜೀವನಪರ್ಯಂತ ಮನುಕುಲಕ್ಕೆ ದುಡಿದ ಹಿರಿಯ ಚೇತನವು ಪ್ರಶಾಂತಿ ಗ್ರಾಮದಲ್ಲಿ ಚಿರಶಾಂತಿ ಹೊಂದಲಿ ಎಂದು ಭಕ್ತರೂ ಸೇರಿದಂತೆ ಎಲ್ಲರೂ ಆಶಿಸಿದಿದ್ದಾರೆ.












Click it and Unblock the Notifications