• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಶಕದ ನಂತರ ಸೇನ್ ಮನೆಯಲ್ಲಿ ವರ್ಷದ ಸಂಭ್ರಮ

By Mahesh
|

ನವದೆಹಲಿ, ಏ. 15: ಪ್ರಸಿದ್ಧ ಸಾರ್ವಜನಿಕ ವೈದ್ಯರೂ, ಮಾನವ ಹಕ್ಕುಗಳ ಹೋರಾಟಗಾರರೂ ಆದ ಡಾ. ಬಿನಾಯಕ್ ಸೇನ್ ಅವರನ್ನು ದೋಷಿ ಎಂದು ತೀರ್ಮಾನಿಸಿ ಸೇನ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ದಶಕದ ನಂತರ ಸೇನ್ ಅವರ ಕುಟುಂಬ ಹಾಗೂ ಅಭಿಮಾನಿಗಳ ಮುಖದಲ್ಲಿ ಸಂತಸದ ನಗು ಮೂಡಿದೆ. ಸೇನ್ ಬಿಡುಗಡೆಯಿಂದ ಇಂದು ಹೊಸ ವರ್ಷಾಚರಣೆ ಸಂಭ್ರಮ((Nabo Barsho, Paila Baishakh)ದಲ್ಲಿರುವ ಬೆಂಗಾಳಿಗಳ ಸಂಭ್ರಮ ಇನ್ನಷ್ಟು ಹೆಚ್ಚಿದೆ. ಮಾನವ ಹಕ್ಕುಗಳ ಕಾನೂನು ಜಾಲ ಸೇರಿದಂತೆ ಅನೇಕ ಸಂಘಟನೆಗಳು ಸೇನ್ ಅವರ ಜಾಮೀನಿಗೆ ಒತ್ತಾಯಿಸಿದ್ದವು.

ಛತ್ತಿಸ್ ಘಡದ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಡಾ. ಸೆನ್ ಅವರ ಮೇಲಿನ ಆರೋಪ ನಿರಾಧಾರವಾಗಿದ್ದು, ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲೂ ಯಾವುದೇ ಸಾಕ್ಷ್ಯಾಧಾರಗಳು ಆರೋಪವನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ. ಸರ್ಕಾರಿ ವಕೀಲರು ಒದಗಿಸಿರುವ ಸಾಕ್ಷ್ಯಾಧಾರಗಳೂ ವಿರೋಧಾಭಾಸಗಳಿಂದ ಕೂಡಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಆದಿವಾಸಿಗಳ ವಿರುದ್ಧ ಛತ್ತಿಸ್ ಘಡ ಸರ್ಕಾರ ನಡೆಸುತ್ತಿರುವ ಆಕ್ರಮಣಗಳನ್ನು ಕಟುವಾಗಿ ಸೇನ್ ಟೀಕಿಸಿದ್ದರು. ಸೇನ್ ಅವರ ಮಾನವ ಹಕ್ಕುಗಳ ಹೋರಾಟವನ್ನು ಸಹಿಸದ ಸರ್ಕಾರ, ಎರಡು ವರ್ಷಗಳ ಜೈಲು ವಾಸ ಅನುಭವಿಸುವಂತೆ ಮಾಡಿತ್ತು. ಆದರೆ, ಇಷ್ಟಕ್ಕೆ ಸುಮ್ಮನಾಗದ ಸರ್ಕಾರ, ಪದೇ ಪದೇ ಮಾನಸಿಕ ಹಿಂಸೆ ನೀಡುತ್ತಿತ್ತು.

ರಾಯ್‌ಪುರದ ವಿಚಾರಣಾ ನ್ಯಾಯಾಲಯವು ಸೇನ್ ಅವರನ್ನು ರಾಜದ್ರೋಹ ಮತ್ತು ಪ್ರಭುತ್ವದ ವಿರುದ್ಧ ಸಮರ ಸಾರುವ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಒಳಪಡಿಸಿತ್ತು.ಕರಾಳ ಭಯೋತ್ಪಾದಕ ವಿರೋಧಿ ಕಾಯ್ದೆಗಳಡಿ ಡಾ.ಸೆನ್ ಅವರ ವಿರುದ್ಧ ಆರೋಪಗಳನ್ನು ಹೊರೆಸಿದ್ದ ಛತ್ತೀಸ್ ಗಢ ಸರ್ಕಾರ, ಜಾಮೀನು ನೀಡಬಾರದು ಎಂದು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Friday, Apr 15 granted bail to Binayak Sen. It seems that the social-activist Dr Sen and his family received justice after a long struggle of a decade. The court dismissed the sedition case against Dr Sen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more