ಎಳನೀರು ಮಾರಲು ಹೊರಟ ಕೆಎಂಎಫ್

ಮಹಾನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ರೈತರಿಂದ ಸಂಗ್ರಹಿಸುವ ಹಾಲಿನಿಂದ ಟೆಟ್ರಾಪ್ಯಾಕ್‌ನಲ್ಲಿ ಎಳನೀರನ್ನು ಸಂಸ್ಕರಿಸಿ, ಸ್ವೀಡನ್‌ನ ಟೆಟ್ರಾ ಕಂಪನಿಯ ಪ್ಯಾಕಿಂಗ್ ತಂತ್ರಜ್ಞಾನದ ಮೂಲಕ ಸಂಸ್ಕರಣೆ ಮಾಡಿ ಮಾರಾಟ ಮಾಡಲಾಗುತ್ತದೆ ಎಂದರು.
ರೈತರಿಂದ ನೇರವಾಗಿ ಎಳನೀರನ್ನು ಖರೀದಿ ಮಾಡಲಾಗುತ್ತದೆ. ಮತ್ತು ಪ್ಯಾಕ್ ಮಾಡಿದ 90 ದಿನಗಳ ಅವಧಿಯವರೆಗೆ ಕೆಡದಂತೆ ಸಂಸ್ಕರಿಸಿ ಇರಿಸಲಾಗುತ್ತದೆ. ಕೋಲಾರ, ಚನ್ನರಾಯನಪಟ್ಟಣ, ಮಂಗಳೂರು, ಬೆಂಗಳೂರು ಸೇರಿದಂತೆ ಕೆಎಂಎಫ್‌ನ ಸಂಸ್ಕರಣಾ ಘಟಕದಲ್ಲಿ ಸಂಸ್ಕರಣ ನಡೆಸಲಾಗುತ್ತದೆ ಎಂದರು.
ಹಾಸನ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ತೆಂಗನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಲು ಉತ್ಪಾದನೆಗಷ್ಟೇ ಸೀಮಿತಗೊಳ್ಳದೇ, ಕೆಎಂಎಫ್ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಂತಾಗುತ್ತಿದೆ ಎಂದರು.
ಹರ್ಷ ವ್ಯಕ್ತಪಡಿಸಿದ ತಾರಾ : ನಟಿ ತಾರಾ ಅವರು ತಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕೆಎಂಎಫ್ ನಂದಿನಿಯ ಗುಡ್ ಲೈಫ್ ಬ್ರಾಂಡಿನ ಎಳನೀರು ಮಾರಾಟ ಮಾಡುವುದು ಸಂತಸದ ಸಂಗತಿ. ಈ ಯೋಜನೆ ಯಶಸ್ವಿಯಾಗಲಿ. ಈ ಬ್ರಾಂಡ್‌ನ ಮಾಡೆಲ್ ಆಗಿ ಮಾರುಕಟ್ಟೆಗೆ ಪ್ರವೇಶಿಸಲು ನಾನು ಉಚಿತವಾಗಿ ನೆರವು ನೀಡುವೆ ಎಂದರು.
ನಂದಿನಿ ಗುಡ್ ಲೈಪ್ ಹಾಲನ್ನು ರಕ್ಷಣಾ ಇಲಾಖೆಗೆ ವಾರ್ಷಿಕವಾಗಿ 90 ಲಕ್ಷ ಲೀಟರ್ ಹಾಲನ್ನು ಸರಬರಾಜು ಮಾಡಲಾಗುತ್ತಿದೆ. ಸೌದಿ, ಕುವೈತ್, ಸಿಂಗಾಪುರ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ 65 ಸಾವಿರ ಲೀಟರ್ ಹಾಲನ್ನು ಪೂರೈಕೆ ಮಾಡಲಾಗುತ್ತಿದೆ. ಇನ್ನೂ ಹಲವಾರು ರಾಷ್ಟ್ರಗಳು ಬೇಡಿಕೆ ಸಲ್ಲಿಸಿವೆ ಎಂದರು.
ಈ ಗುಡ್‌ಲೈಫ್ ಪ್ಯಾಕ್‌ಗೆ ಆಂದ್ರಪ್ರದೇಶದಿಂದ ಸಾಕಷ್ಟು ಬೇಡಿಕೆ ಇದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಸಂಗ್ರಹಿಸಲು ಕ್ರಮಕೈಗೊಳ್ಳಲಾಗುವುದು. ಇದೇ ಮಾದರಿಯಲ್ಲಿ ಎಳನೀರನ್ನು ಉತ್ತಮ ರೀತಿಯಲ್ಲಿ ಸಂಸ್ಕರಿಸಿ, ಯೋಜನೆಯನ್ನು ಯಶಸ್ವಿಗೊಳಿಸಲಾಗುವುದು ಎಂದರು.












Click it and Unblock the Notifications