ಸಚಿವ ಗಾಲಿ ರೆಡ್ಡಿಗೆ ಆಂಧ್ರ ಸಿಎಂ ರೆಡ್ಡಿ ನೋಟಿಸ್
ಬಳ್ಳಾರಿ,
ಏ.13: ಆಂಧ್ರದಲ್ಲಿ ಜನಾರ್ದನ ರೆಡ್ಡಿ ಒಡೆತನದ ಸಂಸ್ಥೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕು ಕಾರ್ಖಾನೆ ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿ ಅಲ್ಲಿನ ಸರ್ಕಾರ ರೆಡ್ಡಿ ಸೋದರರಿಗೆ ನೋಟಿಸ್ ಜಾರಿಮಾಡಿದೆ. ಬ್ರಹ್ಮಿಣಿ ಸ್ಟೀಲ್ ಸಂಸ್ಥೆ ಮೊದಲ ಹಂತದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿಲ್ಲ ಏಕೆ? ಈ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು 30 ದಿನದೊಳಗೆ ಉತ್ತರಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. id="toptextpromo">ಕಡಪ
ಜಿಲ್ಲೆಯಲ್ಲಿ 10 ಮಿಲಿಯನ್ ಟನ್ ಸಾಮರ್ಥ್ಯದ ಉಕ್ಕು ಕಾರ್ಖಾನೆ ನಿರ್ಮಿಸುವ ಸಲುವಾಗಿ 2007ರ ಮೇ 21ರಂದು ಬ್ರಹ್ಮಿಣಿ ಉಕ್ಕು ಕಾರ್ಖಾನೆ ಹಾಗೂ ಆಂಧ್ರ ಸರ್ಕಾರದ ನಡುವೆ ಒಪ್ಪಂದವಾಗಿತ್ತು. ಅದರಂತೆ ಸುಮಾರು 4,500 ಕೋಟಿ ರು. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ 2009ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದು, ನಿಗದಿತ ಸಮಯದಲ್ಲಿ ಈ ಬಗ್ಗೆ ಸೂಕ್ತ ವಿವರಣೆ ನೀಡದಿದ್ದರೆ ಒಪ್ಪಂದ ರದ್ದುಪಡಿಸಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆಂಧ್ರ
ಸರ್ಕಾರ ಸುಮಾರು 14,700 ಎಕರೆ ಭೂ ಪ್ರದೇಶವನ್ನು ಜನಾರ್ದನ ರೆಡ್ಡಿ ಒಡೆತನದ ಕಂಪೆನಿಗೆ ನೀಡಿದೆ. ಇದರಲ್ಲಿ 4 ಸಾವಿರ ಎಕರೆ ಭೂಮಿ ಪ್ರತ್ಯೇಕವಾಗಿ ವಿಮಾನ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. ಆದರೆ, ಬ್ರಹ್ಮಿಣಿ ಉಕ್ಕು ಕಂಪೆನಿ ಈವರೆಗೂ ಸುಮಾರು 1,700 ಕೋಟಿ ರು ಯೋಜನೆಗೆ ಖರ್ಚು ಮಾಡಿದೆ. ಉಳಿದಂತೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಹಿಂದೊಮ್ಮೆ ಬ್ರಹ್ಮಿಣಿ ಉಕ್ಕು ಕಂಪೆನಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡಲು ಜನಾರ್ದನರೆಡ್ಡಿ ಮಾತುಕತೆ ನಡೆಸಿದ್ದರು. ಆದರೆ, ಯಾವುದೂ ಫಲಪ್ರದವಾಗಲಿಲ್ಲ.











Click it and Unblock the Notifications