ಪ್ರಜಾಪ್ರಭುತ್ವಕ್ಕೆ ಸಂದ ಜಯ; ಜೈ ಹೋ ಅಣ್ಣಾ ಹಜಾರೆ

Its a people's victory, Anna Hazare
ನವದೆಹಲಿ, ಏ.9: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ(72) ಅವರ ಹೋರಾಟಕ್ಕೆ ಸರ್ಕಾರ ಕಡೆಗೂ ತಲೆ ಬಾಗಿದೆ. ಕೇಂದ್ರ ಸರಕಾರದ ಆದೇಶ ಪ್ರತಿಯನ್ನು ಹಿಡಿದು ಸ್ವಾಮಿ ಅಗ್ನಿವೇಶ್ ಅವರು ದೀಕ್ಷಾ ಸ್ಥಳ ತಲುಪುತ್ತಿದ್ದಂತೆ ಶನಿವಾರ ಬೆಳಗ್ಗೆ ಜಂತರ್ ಮಂತರ್‌ನಲ್ಲಿ ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು.

ಬಳಿಕ ಅಣ್ಣಾ ಹಜಾರೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಇದು ನನ್ನ ಗೆಲುವಲ್ಲ ನಿಮ್ಮ ಗೆಲುವು. ಪ್ರಜಾಪ್ರಭುತ್ವಕ್ಕೆ ಸಂದ ಜಯ. ಜನ ಬೆಂಬಲಕ್ಕೆ ಸರಕಾರ ಮಣಿದಿದೆ. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಆಗಸ್ಟ್ 15 ರೊಳಗೆ ಮಸೂದೆ ಜಾರಿಯಾಗದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಅಣ್ಣಾ ಸರ್ಕಾರಕ್ಕೆ ಎಚ್ಚರಿಸಿದರು.

ಬಳಿಕ ಅವರು ಸತ್ಯಾಗ್ರಹಿಗಳಿಗೆ ತಂಪು ಪಾನೀಯ ನೀಡಿ ನಿರಶನವನ್ನು ಅಂತ್ಯಗೊಳಿಸಿದರು. 'ಲಗಾನ್' ಚಿತ್ರದಲ್ಲಿನ ಜನಪ್ರಿಯ ಗೀತೆ "ಮಿಥುವ ಹೇ ಮಿಥುವ..." ಹಾಡಿನ ಬಳಿಕ ಪುಟ್ಟ ಬಾಲಕಿ ಕೈಯಿಂದ ನಿಂಬೆ ತಂಪು ಪಾನೀಯ ಸ್ವೀಕರಿಸಿ ತಮ್ಮ ಐದು ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಅವರ ಉಪವಾಸ ಸತ್ಯಾಗ್ರಹ ಅಂತ್ಯವಾಗುತ್ತಿದ್ದಂತೆ ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾರಾಂ... ಹಿನ್ನೆಲೆಯಲ್ಲಿ ಕೇಳಿಬರುತ್ತಿತ್ತು.

ಪ್ರಜಾಪ್ರಭುತ್ವಕ್ಕೆ ಸಂದ ಜಯವನ್ನು ಇಂದು ಸಂಜೆ ಆರು ಗಂಟೆಗೆ ಇಂಡಿಯಾ ಗೇಟ್ ಬಳಿ ಆಚರಿಸಲಿದ್ದಾರೆ. ಈ ವಿಜಯೋತ್ಸವಕ್ಕೆ ಎಲ್ಲರೂ ಬರಬೇಕು ಎಂದು ಅಣ್ಣಾ ಹಜಾರೆ ಆಹ್ವಾನ ನೀಡಿದ್ದಾರೆ. ವೇದಿಕೆಯಲ್ಲಿ ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್ ಸೇರಿದಂತೆ ಸಾವಿರಾರು ಅಣ್ಣಾ ಬೆಂಬಲಿಗರು ಉಪಸ್ಥಿತರಿದ್ದರು. ಇತ್ತ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲೂ ತಂಪು ಪಾನೀಯ ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಹೋರಾಟಗಾರರು ಅಂತ್ಯಗೊಳಿಸಿದರು.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+