ಅಗ್ನಿ ಆಕಸ್ಮಿಕದಲ್ಲಿ ಮಕ್ಕಳಿಬ್ಬರ ದುರಂತ ಸಾವು

ಮನೆಯಲ್ಲಿ ಕೂಡಿಹಾಕಿ ಮನೆಗೆ ಬೀಗ ಜಡಿದು ಕೆಲಸಕ್ಕೆ ಹೋಗಿದ್ದ ಭಾಗ್ಯ ಎಂಬಾಕೆಯ ನಿರ್ಭಾಗ್ಯ ಮಕ್ಕಳು ಭರತ್ (6) ಮತ್ತು ಶರತ್ (6). ಆಟವಾಡುತ್ತಿದ್ದಾಗ ಸೀಮೆಎಣ್ಣೆ ಕ್ಯಾನ್ ಗೆ ಬೆಂಕಿ ಹತ್ತಿಕೊಂಡು ಮಕ್ಕಳು ಇಹಲೋಕ ತ್ಯಜಿಸಿದ್ದಾರೆ.
ಈ ಘಟನೆ ಸುಮಾರು 1 ಗಂಟೆಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಬೆಳಕಿಗೆ ಬಂದಿರುವುದು ಸುಮಾರು 2 ಗಂಟೆಗೆ. ಇದು ಗಮನಕ್ಕೆ ಬಂದು ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಕ್ಕಳು ಬದುಕಿ ಉಳಿಯಲಿಲ್ಲ. ಉಸಿರುಗಟ್ಟುವಿಕೆಯಿಂದ ಮಕ್ಕಳು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆ, ಮಕ್ಕಳನ್ನಷ್ಟೇ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ತಂದೆತಾಯಂದಿರಿಗೆ ಒಂದು ಪಾಠವಾಗಬೇಕಿದೆ. ಇಂದಿನ ಕಾಲದಲ್ಲಿ ಸುಖಕರ ಜೀವನ ಸಾಗಿಸಲು ಪಾಲಕರಿಬ್ಬರೂ ಕೆಲಸಕ್ಕೆ ಹೋಗಬೇಕಿರುವುದು ಅಗತ್ಯವಾಗಿದೆಯಾದರೂ, ಇನ್ನೂ ತಮ್ಮನ್ನು ತಾವೇ ಸಂಭಾಳಿಸಲು ಸಾಧ್ಯವಿಲ್ಲ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವುದು ಎಷ್ಟು ಸಮಂಜಸ? ಅಜ್ಜ, ಅಜ್ಜಿಯರಿದ್ದರೆ ಓಕೆ. ಇಲ್ಲದಿದ್ದರೆ ಅಕ್ಕಪಕ್ಕದಲ್ಲಿ ಡೇಕೇರ್ ಗಳು ಅಣಬೆಯಂತೆ ಹುಟ್ಟಿಕೊಂಡೇ ಇರುತ್ತವೆ. ಅಲ್ಲಿ ಬಿಟ್ಟರೂ ಆಯಿತು. ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುವ ಪಾಲಕರು ಈ ನಿಟ್ಟಿನಲ್ಲಿ ಚಿಂತಿಸಲಿ.












Click it and Unblock the Notifications