ಟೀಂ ಇಂಡಿಯಾಗೆ ಬಿಡಿಎ ಸೈಟು : ಯಡಿಯೂರಪ್ಪ
ಬೆಂಗಳೂರು, ಏ.3: ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಭಾರತ ತಂಡಕ್ಕೆ ರಾಜಕೀಯ ವಲಯದಿಂದ ಭಾರಿ ಶುಭ ಹಾರೈಕೆ, ಔತಣ, ಉಡುಗೊರೆಗಳ ಮಹಾಪೂರ ಸಿಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಟೀಂ ಇಂಡಿಯಾಕ್ಕೆ ಬಿಡಿಎ ಸೈಟು ನೀಡುವುದಾಗಿ ಘೋಷಿಸಿದ್ದಾರೆ
ಮೇಲುಕೋಟೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲು ತೆರಳುತ್ತಿದ್ದ ಯಡಿಯೂರಪ್ಪ ಅವರು, ಸುದ್ದಿಗಾರರೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡರು. ವಿಶೇಷವಾಗಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿಯನ್ನು ಹಾಡಿ ಹೊಗಳಿದರು. ಧೋನಿ ಅವರ ತಾಳ್ಮೆ, ಜಾಣ್ಮೆ ಹಾಗೂ ಸಂದರ್ಭೋಚಿತ ಆಟವನ್ನು ಪ್ರಶಂಸಿದ ಯಡಿಯೂರಪ್ಪ, ಧೋನಿ ಅತ್ಯುತ್ತಮ ನಾಯಕ ಎಂದು ಘೋಷಿಸಿದರು. [ಗ್ಯಾಲರಿ: ಭಾರತದ ವಿಜಯೋತ್ಸವ]
ವಿಶ್ವಕಪ್ ಫೈನಲ್ ಗೂ ಮುಂಚೆ ಘೋಷಿಸಿದಂತೆ, ಟೀಂ ಇಂಡಿಯಾದ ಪ್ರತಿ ಆಟಗಾರರಿಗೂ ಬಿಡಿಎ ಸೈಟು ಲಭ್ಯವಾಗಲಿದೆ. ಭಾರತ ತಂಡದ ಆಟಗಾರರು ಬಿಡುವಾದಾಗ, ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಸನ್ಮಾನಿಸಿ, 50 X80 ಬಿಡಿಎ ವಸತಿ ನಿವೇಶನದ ಹಕ್ಕುಪತ್ರಗಳನ್ನು ನೀಡಲಾಗುವುದು. ಟೀಂ ಇಂಡಿಯಾ ಆಟಗಾರರಲ್ಲದೆ ಕೋಚ್ ಗ್ಯಾರಿ ಕರ್ಸ್ಟರ್ನ್ ಸೇರಿದಂತೆ ಸಹಾಯಕ ತಂಡಕ್ಕೂ ಈ ಕೊಡುಗೆ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಯಡಿಯೂರಪ್ಪ ಹೇಳಿದರು. [












Click it and Unblock the Notifications