• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಡೆದಾಡುವ ದೇವರಿಗೆ 104ನೇ ಹುಟ್ಟುಹಬ್ಬ

By Mahesh
|

Siddaganga Seer celebrates 104th birthday
ತುಮಕೂರು, ಏ.1: ತ್ರಿವಿಧ ದಾಸೋಹಿ, ನಡೆದಾಡುವ ದೆವರೆಂದೇ ವಿಶ್ವಖ್ಯಾತಿ ಗಳಿಸಿರುವ ಸಿದ್ದಗಂಗಾ ಮಠಾಧ್ಯಕ್ಷ, ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ ಅವರು ಇಂದು ತಮ್ಮ 104ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಮುಂಜಾನೆಯಿಂದಲೇ ಸಿದ್ದಗಂಗಾ ಮಠಕ್ಕೆ ಭಕ್ತಸಮೂಹ ಹರಿದು ಬರುತ್ತಿದ್ದು, ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸೋಮಣ್ಣ ಸೇರಿದಂತೆ ಹಲವಾರು ಮುಖಂಡರು ತಮ್ಮ ಕುಟುಂಬ ಸಮೇತ ಶ್ರೀಗಳ ಪಾದಗೆರಗಿ ಆಶೀರ್ವಾದ ಬೇಡಿದರು.

ಇಂದು ಮುಂಜಾನೆ 5 ಗಂಟೆಗೆ ವಿವಿಧ ಮಠಾಧಿಪತಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು. ನಾಡಿನ ವಿವಿಧೆಡೆಗಳಿಂದ ಬಂದಿರುವ ಭಕ್ತಾದಿಗಳು ಶ್ರೀಗಳ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ಲಕ್ಷಾಂತರ ಭಕ್ತಾದಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿದ್ದು, ಎಲ್ಲವೂ ಅಚ್ಚುಕಟ್ಟಾಗಿ ಸಾಗಿದೆ. ತುಮಕೂರು ಸೇರಿದಂತೆ ವಿವಿಧೆಡೆ ಸ್ವಾಮೀಜಿಗಳ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ತುಮಕೂರು ರೋಟರಿ ಅಧ್ಯಕ್ಷ ಎಚ್ ಆರ್ ವಿಶ್ವನಾಥ್ ಹೇಳಿದರು. [ಗ್ಯಾಲರಿ: ಸಿದ್ದಗಂಗಾ ಶ್ರೀ ಜತೆ ಸಿಎಂ ಕುಟುಂಬ]

12ನೇ ಶತಮಾನದ ಶರಣರ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಕ್ರಾಂತಿಯ ಪ್ರತೀಕವಾಗಿರುವ ಸಿದ್ಧಗಂಗಾ ಮಠದ ಕೀರ್ತಿಯನ್ನು ಹೆಚ್ಚಿಸಿದವರು ಶಿವಕುಮಾರ ಸ್ವಾಮೀಜಿಗಳು ಎಂದರೆ ತಪ್ಪಾಗಲಾರದು. ಚಿರಯೌವನದ ಪ್ರತೀಕದಂತಿರುವ ಕ್ರೀಯಾಶೀಲ ಸ್ವಾಮೀಜಿಗಳು, ಮಠದ ಸುಮಾರು 8 ಸಾವಿರ ಮಕ್ಕಳಿಗೆ ಅನ್ನ, ಶಿಕ್ಷಣ ಹಾಗೂ ವಸತಿ ನೀಡುವ ಮೂಲಕ ಅವರ ಭವಿಷ್ಯ ರೂಪಿಸುತ್ತಿದ್ದಾರೆ.

English summary
Chief Minister BS Yeddyurappa along with his family members visited Siddaganga mutt in Tumkur today(April. 1) and greeted Siddganga Seer Dr. Shivakumara Swamiji on his 104th birthday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X