ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ತೋಟದ ಮನೆಯಲ್ಲಿ ಮಾರಣಹೋಮ

By Mahesh
|
Google Oneindia Kannada News

Murder in Tumkur Farm House
ತುಮಕೂರು, ಏ.1: ತೋಟದ ಕಾವಲು ಕಾಯುತ್ತಿದ್ದ ಕುಟುಂಬದ ಮೂವರು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಕೋರ ಪೋಲಿಸ್ ಠಾಣಾ ವ್ಯಾಪ್ತಿಯ ಗಿರೇನಹಳ್ಳಿ ಬಳಿ ಇರುವ ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಅವರಿಗೆ ಸೇರಿದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ.

ತೋಟದಲ್ಲಿ ಕಳೆದ 10 ವರ್ಷಗಳಿಂದ ತೋಟದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ಸಿಂಗೋನಹಳ್ಳಿ ನಿವಾಸಿ ದೊಡ್ಡಯ್ಯ (68), ಪುಟ್ಟಮ್ಮ (60), ರಾಜಮ್ಮ (35) ಅವರುಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ತೋಟದ ಸುತ್ತಮುತ್ತ ಕಾಡಿನಲ್ಲಿ ಸೌದೆಗಾಗಿ ಬಂದವರು, ನೀರು ಕೇಳಲು ತೋಟದ ಮನೆಗೆ ಹೋದಾಗ ಈ ಕೊಲೆ ಬೆಳಕಿಗೆ ಬಂದಿದೆ. ಕೋರ ಠಾಣೆ ಎಸ್.ಐ. ರಾಮಕೃಷ್ಣಯ್ಯ ಅವರ ತಂಡ ತನಿಖೆ ನಡೆಸುತ್ತಿದೆ.

ಜಮೀನು ವಿವಾದ ಕಾರಣ? : ದೊಡ್ಡಯ್ಯ ಅವರ ಸೋದರರ ಜೊತೆ ಜಮೀನು ವಿವಾದ ಹಾಗೂ ರಾಜಮ್ಮನ ಗಂಡನ ಮನೆಯವರಜೊತೆಯು ವೈಮನಸ್ಯ ಹೊಂದಿದ್ದರು. ರಾಜಮ್ಮನ ಮೃತ ದೇಹ ಅಡುಗೆ ಮನೆಯಲ್ಲಿ ಬಿದ್ದಿದ್ದು, ದೊಡ್ಡಯ್ಯ ಮತ್ತು ಪುಟ್ಟಮ್ಮನ ಮೃತ ದೇಹಗಳು ಹಾಲ್‌ನಲ್ಲಿ ಬಿದ್ದಿದ್ದವು. ಹೀಗಾಗಿ ಹತ್ಯೆಯ ಮುನ್ನ ಕೊಲೆಗಾರರ ನಡುವೆ ಸಾಕಷ್ಟು ಹೋರಾಟ ನಡೆಸಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಯ್ಯ ಅವರ ಸೋದರ ಸದ್ಯಕ್ಕೆ ನಾಪತ್ತೆಯಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ರಾಮಕೃಷ್ಣಯ್ಯ ಹೇಳಿದ್ದಾರೆ.

English summary
Three persons found murdered in Praja Pragati Editor Naganna's Farm House. Doddaiah and his wife Puttamma and daughter Rajamma brutally killed. Kora Police Station Sub Inspector Ramakrishnaiah suspect land deal may be the main cause and Doddaiah's brother who is prime suspect is missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X