ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲ ಮೇಲೆ ದಾಳಿ

By Mahesh
|
Google Oneindia Kannada News

Hindu temple in New South Wales
ನ್ಯೂ ಸೌತ್ ವೇಲ್ಸ್‌, ಮಾ.31: ಇಲ್ಲಿನ ಪ್ರಾಚೀನ ಹಿಂದೂ ದೇವಾಲಯವೊಂದರ ಮೇಲೆ ಬಂದೂಕು ಹೊತ್ತ ಅಜ್ಞಾತ ಮುಸುಕುಧಾರಿಗಳು ಇತ್ತೀಚೆಗೆ ದಾಳಿ ನಡೆಸಿದ್ದಾರೆ. ಬಂದೂಕುಧಾರಿಗಳು ದೇವಾಲಯದಲ್ಲಿ ಅನೇಕ ಬಾರಿ ಗುಂಡು ಹಾರಿಸಿದ್ದಾರೆ. ಸುಮಾರು ಮೂರು ದಶಕಗಳಿಗೂ ಹಳೆಯದಾದ ಆಬರ್ನ್‌ನಲ್ಲಿರುವ ಶ್ರೀಮಂದಿರದ ಮೇಲೆ ಮುಸುಕುಧಾರಿ ವ್ಯಕ್ತಿಗಳು ಮಾರ್ಚ್ 19ರ ರಾತ್ರಿ ದಾಳಿ ನಡೆಸಿದ್ದಾರೆ ಎಂದು ಸಿಡ್ನಿ ಹೆರಾಲ್ಡ್ ವಿವರಿಸಿದೆ.

ದಾಳಿಯ ಘಟನೆಯನ್ನು ದೇವಾಲಯದಲ್ಲಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಅಥವಾ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಆದರೆ ದಾಳಿಯ ವೇಳೆ ದೇವಾಲಯದಲ್ಲಿದ್ದ ಅರ್ಚಕರು ಹಾಗೂ ಭಕ್ತಾದಿಗಳು ದಿಗ್ಭ್ರಾಂತರಾಗಿದ್ದರು ಎನ್ನಲಾಗಿದೆ. ಘಟನೆಯ ಮುದ್ರಿತ ದಾಖಲೆಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಇಲ್ಲಿನ ನಿವಾಸಿ ಹಾಗೂ ಸ್ಥಳೀಯ ಪತ್ರಿಕೆ 'ದಿ ಇಂಡಿಯನ್"ನ ಸಂಪಾದಕ ರೋಹಿತ್ ರೇವೊ ತಿಳಿಸಿದ್ದಾರೆ.

ದೇವಾಲಯದ ಪ್ರವೇಶದ್ವಾರದ ಗೋಡೆಗೆ ಕೆಲವು ಗುಂಡುಗಳು ಬಡಿದಿವೆ. ಅವುಗಳಲ್ಲೊಂದು ಗೋಡೆಯ ಮೂಲಕ ನುಸುಳಿ ದೇವಾಲಯದ ತುರ್ತು ದ್ವಾರದ ಬಾಗಿಲಿಗೆ ಬಡಿದಿದೆ ಎಂದು ಅವರು ವಿವರಿಸಿದ್ದಾರೆ. [ಹಿಂದೂ ದೇಗುಲ ಮೇಲೆ ದಾಳಿ ವಿಡಿಯೋ ನೋಡಿ]

ಸುರಕ್ಷತೆ ಇಲ್ಲ: ಕಳೆದ ನವೆಂಬರ್‌ನಲ್ಲಿ ಆರು ಮಂದಿ ಭಕ್ತರು ದೇವಾಲಯದೊಳಗಿದ್ದ ವೇಳೆ ಕೆಲವು ಶಸ್ತ್ರಧಾರಿ ವ್ಯಕ್ತಿಗಳು ಲೋಹದ ಕಂಬಿಗಳಿಂದ ದೇವಾಲಯದ ಎರಡು ಕಿಟಕಿಗಳನ್ನು ಧ್ವಂಸಗೊಳಿಸಿದ್ದ ಘಟನೆಯೂ ನಡೆದಿತ್ತು. ಸ್ಪಲ್ಪ ಸಮಯದ ಹಿಂದೆ ಕೆಲವು ಯುವಕರು ತನಗೆ ಕಿರುಕುಳ ನೀಡುತ್ತಿದ್ದರು ಎಂದು ದೇವಾಲಯದ ಪ್ರಧಾನ ಅರ್ಚಕ ಜತಿನ್‌ಕುಮಾರ್ ಭಟ್, ಹೇಳಿದ್ದಾರೆ.

ನನ್ನ ಕುಟುಂಬವೂ ನನ್ನ ಜೊತೆಗಿದೆ. ಪತ್ನಿ ಹಾಗೂ ಮೂವರು ಕಂದಮ್ಮಗಳಿದ್ದಾರೆ. ಮೊಟ್ಟೆಗಳನ್ನು ಹಾಗೂ ಬಾಟಲಿಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಆದರೆ ಗುಂಡಿನ ದಾಳಿಯು ನಿಜಕ್ಕೂ ನಮ್ಮನ್ನು ದಿಗ್ಭ್ರಾಂತರನ್ನಾಗಿಸಿದೆ ಎಂದವರು ತಿಳಿಸಿದ್ದಾರೆ.

English summary
Hindu temple in New South Wales was attacked by unidentified masked men recently. These gunmen also fired many shots at temple.People in this area are under panic. Australian police are investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X