• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವರಾಜ್, ಜಹೀರರತ್ತ ಜಾಹೀರಾತು ಸುನಾಮಿ

By Srinath
|

ಮುಂಬೈ, ಮಾ. 29: ವಿಶ್ವ ಕಪ್ ವಿಜಯದುಂದುಭಿ ಮೊಳಗಿಸಲು ಭಾರತಕ್ಕೆ ಇನ್ನು ಎರಡೇ ಸುತ್ತು ಬಾಕಿಯಿದೆ. ಆದರೆ ತಂಡದ ಎರಡು ಧ್ರುವ ತಾರೆಗಳ (ಸಾಮಾನ್ಯವಾಗಿ, ಧ್ರುವ ತಾರೆ ಇರುವುದು ಒಂದೇ) ಜಾಹೀರಾತು ಲೆಕ್ಕ ತಾರೆಗಳಂತೆಯೆ ಅಗಣಿತವಾಗತೊಡಗಿದೆ. ಯಾರಪ್ಪಾ ಆ ಎರಡು ತಾರೆಗಳು ಎಂಬುದು ನಿಮಗೂ ತಿಳಿದಿರಬಹುದು. ಅವರೇ, ವಿಶೇಷ ಶಕ್ತಿಯ ಪ್ರೇರಣೆಯಲ್ಲಿರುವ ಯುವರಾಜ್ ಸಿಂಗ್ ಮತ್ತು ಮಿಸ್ಟರ್ ಡಿಪೆಂಡೆಂಟ್ ಜಹೀರ್ ಖಾನ್.

ನೂರ್ಕೋಟಿ ಜನರ ಆಶಯದಂತೆ ಯುವರಾಜ್ ಭಾರತದ ಪರ ಕಪ್ ಎತ್ತಿಹಿಡಿದರೆ ಕ್ರೆಸ್ಟ್ ಗೆಟ್ ಮುರಿದು ಜಾಹೀರಾತು ಹೊಳೆ ಹರಿಯಲಿದೆ. ಅದೇ ರೀತಿ ಜಹೀರ್ ಖಾನ್ ಪಾಕ್ ಬ್ಯಾಟಿಂಗ್ ಕೋಟೆಯನ್ನು ಛಿದ್ರಗೊಳಿಸಿದರೆ ಮಾರುಕಟ್ಟೆಯಲ್ಲಿನ ಬ್ರ್ಯಾಂಡ್ ಗಳು ಹಿಂದೆಂದೂ ಕಾಣದ ರೀತಿಯಲ್ಲಿ ಜಹೀರರನ್ನು ಜಾಹೀರಾತು ಉತ್ತುಂಗಕ್ಕೆ ಕೊಂಡೊಯ್ಯಲಿದೆ. ವಿಶ್ವ್ ಕಪ್ ನಲ್ಲಿ ಅದ್ಭುತ ಪ್ರದರ್ಶನದಿಂದಾಗಿ ಯುವಕನಿಂದ ಪರಿಪಕ್ವ ಪುರುಷನಾಗಿ ವಿಕಸನಗೊಂಡಿರುವ ಯುವ್ವಿ ಬ್ರ್ಯಾಂಡ್ ಸಹ ವಿಕಸನಗೊಳ್ಳಲಿದೆ.

ಇನ್ನು ಈಗಾಗಲೇ ಎರಡು ಬಾರಿ ಭರ್ಜರಿ ಪ್ರದರ್ಶನ ನೀಡಿರುವ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ಇನ್ನೊಂದು ಬಾರಿ ಅಂತಹ ಅದ್ಭುತ ಪ್ರದರ್ಶನ ನೀಡಿದರೂ ಅವರ ಜಾಹೀರಾತು ಲೆಕ್ಕಾಚಾರ ಉಚ್ಛ್ರಾಯಕ್ಕೇರಲಿದೆ. ತಂಡದ ನಾಯಕ ಧೋನಿ ಅವರ ಜಾಹೀರಾತು ದೋಣಿಯೂ ಸರಾಗವಾಗಿ ದಡ ತಲುಪಲಿದೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Team India may just be two steps away from a historic World Cup victory, but the march up to semis has already raised the commerce quotient of its stars. If Yuvraj plays yet another stellar innings and then perhaps even helps win the trophy, expect to see the man in a few more advertisements. ditto with Mr dependent, Zaheer Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X