ಧೋನಿ ಪಡೆಗೆ ದೊಡ್ಡ ಗೌಡರ ಶುಭ ಹಾರೈಕೆ
ಬೆಂಗಳೂರು ಮಾ 29 : ದೇಶದ 24X7 ರಾಜಕಾರಿಣಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರಾಜಕಾರಣ ಬಿಟ್ಟು ಕ್ರಿಕೆಟ್ ಬಗ್ಗೆ ಚಿಂತನೆ ನಡೆಸಿದ್ದಾರೆ. ಗೆದ್ದು ಬಾ ಇಂಡಿಯಾ... ವಿಶ್ವಕಪ್ ಗೆದ್ದು ಬಾ.. ಎಂದು ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಹುಡುಗರು ಅಸಮಾನ್ಯರು ಅವರಿಗೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆಯೆಂದು ಹೇಳಿಕೆ ನೀಡಿದ್ದಾರೆ.
ಬುಧವಾರದಂದು ಮೊಹಾಲಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕ್ ವಿರುದ್ದದ ಪಂದ್ಯದಲ್ಲಿ ಗೆದ್ದು ನಂತರ ವಿಶ್ವಕಪ್ ಕೂಡಾ ಗೆದ್ದು ತರಲಿ. ರಾಷ್ಟ್ರದ ಜನತೆಯ ಪರವಾಗಿ ವಿಶ್ವಕಪ್ ನ್ನು ಭಾರತ ಮುಡಿಗೇರಿಸಿಕೊಂಡು ಬರಲೆಂದು ಹಾರೈಸುತ್ತೇನೆ. ಈ ಬಗ್ಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ದೇವೇಗೌಡ ಹೇಳಿದ್ದಾರೆ.
ಮೊಹಾಲಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲು ಪಾಕ್ ಪ್ರಧಾನಿಯವರನ್ನು ಆಹ್ವಾನಿಸಿದ್ದು ಒಳ್ಳೆ ಬೆಳವಣಿಗೆ. ಈ ಹಿಂದೆ ಕೂಡಾ ಜಿಯಾ ಉಲ್ ಹಕ್, ಮುಷರಫ್ ಪಂದ್ಯ ವೀಕ್ಷಿಸಲು ಬಂದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಧ ಗಟ್ಟಿಯಾಗಲು ಕ್ರೀಡೆ ಸಹಕಾರಿಯಾಗಬಹುದೆಂದು ದೇವೇಗೌಡ ಆಶಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications