ಇಂಟರ್ ಪೋಲ್ ತೆಕ್ಕೆಗೆ ಕ್ರಿಕೆಟ್ ಉಗ್ರ: ಹೈ ಅಲರ್ಟ್
ನವದೆಹಲಿ,
ಮಾ. 25: ಹಾಲಿ ವಿಶ್ವ ಕಪ್ ಕ್ರಿಕೆಟ್-ಗೆ ಭಯೋತ್ಪಾದಕ ದಾಳಿ ಭೀತಿ ದಟ್ಟವಾಗಿದ್ದು ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅನಾಥ ಬ್ಯಾಗೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲ ಬ್ಯಾಗೇಜ್-ಗಳನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆಯೂ ಸೂಚಿಸಿಲಾಗಿದೆ. ಮುಂಬೈನಲ್ಲಿ ಏಪ್ರಿಲ್ 2ರಂದು ಫೈನಲ್ಸ್ ನಡೆಯುವ ಹಿನ್ನೆಲೆಯಲ್ಲಿ ಈ ಕಟ್ಟೆಚ್ಚರ ಘೋಷಿಸಲಾಗಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>ಈ ಮಧ್ಯೆ ಪಾಕಿಸ್ತಾನದ ನೆರವಿನೊಂದಿಗೆ ವಿಶ್ವ ಕಪ್ ಕ್ರಿಕೆಟ್ -ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಶಂಕಿತ ಉಗ್ರನೊಬ್ಬನನ್ನು ಬಂಧಿಸಿರುವುದಾಗಿ ಇಂಟರ್ ಪೋಲ್ ಮುಖ್ಯಸ್ಥ ರೊನಾಲ್ಡ್ ನೋಬಲ್ ತಿಳಿಸಿದ್ದಾರೆ. ಭಯೋತ್ಪಾದಕನನ್ನು ಯಾವ ರಾಷ್ಟ್ರದಲ್ಲಿ ಬಂಧಿಸಲಾಗಿದೆ ಎಂಬುದನ್ನು ಬಹಿರಂಗಪಡಿಸದ ನೋಬಲ್, ಬಂಧಿತ ಉಗ್ರನು ಯಾವುದೇ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನೂ ತಿಳಿಸಲಿಲ್ಲ.
ಭಯೋತ್ಪಾದನೆ
ದಾಳಿ ಮಾಡುವ ಉದ್ದೇಶದೊಂದಿಗೆ ಕರಾಚಿಯಿಂದ ಮಾಲ್ಡೀವ್ಸ್-ನತ್ತ ಹೊರಟಿದ್ದ ಉಗ್ರನೊಬ್ಬನನ್ನು ಕಳೆದ ವಾರ ಪತ್ತೆ ಹಚ್ಚಿ, ಬಂಧಿಸಲಾಗಿದೆ. ಇದಕ್ಕೆ ಪಾಕ್, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಪೊಲೀಸರ ನೆರವು ಪಡೆಯಲಾಗಿತ್ತು. ದಾಳಿಯ ಭೀತಿ ಗಂಭೀರವಾಗಿತ್ತು. ಆದರೆ ಉಪಖಂಡದ ಪೊಲೀಸರು ಇದೀಗ ನಿರಾಳರಾಗಿದ್ದು, ಯಾವುದೇ ಆತಂಕವಿಲ್ಲದೆ ಪಂದ್ಯಗಳು ಸುಸೂತ್ರವಾಗಿ ನಡೆಯಲಿವೆ ಎಂದು ನೋಬಲ್ ಇಸ್ಲಾಮಾಬಾದಿನಲ್ಲಿ ಶುಕ್ರವಾರ ಹೇಳಿದ್ದಾರೆ.











Click it and Unblock the Notifications