ಸವಣೂರಲ್ಲಿ ಸತ್ಯಬೋಧರ 226ನೇ ಆರಾಧನೆ

ನಗರದ ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಮೂರು ದಿನಗಳ ಪರ್ಯಂತ ಜರುಗಿದ ಆರಾಧನಾ ಮಹೋತ್ಸವವನ್ನು, ಪಂ. ರಂಗಾಚಾರ್ಯ ಗುತ್ತಲ ಹಾಗೂ ಶ್ರೀಮಠದ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಬೃಹತಿ ಸಹಸ್ರಯಾಗ, ಧನ್ವಂತರಿ ಹೋಮ, ಉದಯರಾಗ, ರಜತ ರಥೋತ್ಸವ, ಪಂಚಾಮೃತ, ಕ್ಷೀರಾಭಿಷೇಕ, ಸುವರ್ಣ ಕವಚ ಅಲಂಕಾರ, ಕನಕಾಭಿಷೇಕ, ಹಸ್ಥೋದಕ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದರು. ಪ್ರತಿನಿತ್ಯ ಸಂಜೆ ಪಂಡಿತರಿಂದ ಉಪನ್ಯಾಸ, ಪ್ರವಚನ, ಅಷ್ಟಾವಧಾನ ಸೇವಾ, ತೊಟ್ಟಿಲ ಪೂಜಾ, ಪಲ್ಲಕ್ಕಿ ಉತ್ಸವಗಳು, ಭಜನಾ ಕಾರ್ಯಕ್ರಮ ಜರುಗಿದವು.
ಗಾಯಕರಾದ ಮೈಸೂರಿನ ರಾಮಚಂದ್ರ ಅವರಿಂದ ದಾಸ ಸಾಹಿತ್ಯ ಕಾರ್ಯಕ್ರಮ ಹಾಗೂ ರಾಯಚೂರಿನ ಹರಿದಾಸ ಹವ್ಯಾಸ ಕಲಾವಿದರ ಸಂಘದ ಸದಸ್ಯರಿಂದ ಪ್ರದರ್ಶನಗೊಂಡ ದಾಸೋಹಂ ತವ ದಾಸೋಹಂ'' ಎಂಬ ನಾಟಕ ಪ್ರದರ್ಶನ ಆರಾಧನಾ ಮಹೋತ್ಸವದಲ್ಲಿ ಜನಾಕರ್ಷಣೆಯನ್ನು ಪಡೆದುಕೊಂಡವು. ನಾಡಿನ ಹಲವಾರು ಪಂಡಿತರು, ಸಹಸ್ರಾರು ಭಕ್ತ ಸಮೂಹ ಶ್ರೀ ಸತ್ಯಬೋಧರ ಆರಾಧನಾ ಮಹೋತ್ಸವದಲ್ಲಿ ಭಾಗಿಗಳಾಗಿದ್ದರು. ಪರ್ಯಾಯಸ್ಥರಾದ ಭೀಮಾಚಾರ್ಯ ರಾಯಚೂರ, ಗೋಪಾಲಾಚಾರ್ಯ ರಾಯಚೂರ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀವಾದಿರಾಜರ ಆರಾಧನಾ : ಜ್ಞಾನಿವರೇಣ್ಯರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು ಸವಣೂರಿನ ವಾದಿರಾಜ ಗುರುಗಳ ಮೃತ್ತಿಕಾ ವೃಂದಾವನ ಮಠದಲ್ಲಿ ಮಂಗಳವಾರ, ಮಾ.22ರಂದು ಕೈಗೊಳ್ಳಲಾಗುತ್ತದೆ. ಕಾರ್ಯಕ್ರಮದ ಅನ್ವಯ ಉದಯರಾಗ, ಅಷ್ಟೋತ್ತರ, ಪವಮಾನ ಹೋಮ, ಕ್ಷೀರಾಭಿಷೇಕ, ರಜತ ಪಾದುಕಾ ಸಮರ್ಪಣೆ, ಹಸ್ಥೋದಕ, ತೀರ್ಥಪ್ರಸಾದ ವಿತರಣೆ, ಭಜನಾ ಮಂಡಳಿಯಿಂದ ಹರಿ ಭಜನೆ, ಅಷ್ಟಾವಧಾನ ಸೇವೆಗಳು ನೆರವೇರಲಿದೆ. ರಾಮಾಚಾರ್ಯ ನಾಮಾವಳಿ ಅವರು ಆರಾಧನಾ ಮಹೋತ್ಸವವನ್ನು ನಿರ್ವಹಿಸಲಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications