ಮೈಕ್ರೋಸಾಫ್ಟ್ ಪರೀಕ್ಷೆಯಲ್ಲಿ ಪೋರನ ವಿಶ್ವ ದಾಖಲೆ
ರಾಜಕೋಟಾ,
ಮಾ. 20: ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಇಂಟರ್ ನೆಟ್ ಮೂಲಕ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ 11 ವರ್ಷದ ಬಾಲಕನೊಬ್ಬ 1,000 ಕ್ಕೆ 1,000 ಅಂಕ ಗಳಿಸಿ, ವಿಶ್ವ ದಾಖಲೆ ಮಾಡಿದ್ದಾನೆ. ಗುಜರಾತಿನ ರಾಜಕೋಟೆಗೆ ಇದು ಎರಡನೆಯ ಹಿರಿಮೆಯಾಗಿದೆ. id="toptextpromo">ಐದನೇ
ತರಗತಿಯ ಅಕ್ಷಿತ್ ಜಯೇಶ್ ಧ್ರುವ್ ಮಾರ್ಚ್ 16ರಂದು ಈ ಸಾಧನೆ ಮೆರೆದಿದ್ದಾನೆ. ಇನ್ ಸೈಡ್ ಟುಮಾರೊ ಕಂಪ್ಯೂಟರ್ ಅಕಾಡೆಮಿಯಲ್ಲಿ ಓದುತ್ತಿರುವ ಅಕ್ಷಿತ್, 119 ರಾಷ್ಟ್ರಗಳಲ್ಲಿ 3ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದುತ್ತಿರುವವರು 17,000 ಪರೀಕ್ಷಾರ್ಥಿಗಳನ್ನು ಸೋಲಿಸಿದ್ದಾನೆ ಎಂದು ಅಕಾಡೆಮಿ ಮುಖ್ಯಸ್ಥ ಚಿರಾಗ್ ಕೊಠಾರಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಹಿಂದೆ ಇದೇ ನಗರದ 21 ವರ್ಷದ ಶ್ರುತಿ ದೋಶಿ ಅವರು ಇಂತಹ ಸಾಧನೆಗೈದಿದ್ದರು. 2004ರಲ್ಲಿ ನ್ಯೂಜಿಲಾಂಡ್-ನ ಪೀಟರ್ ಫಿಲ್ 2004ರಲ್ಲಿ 999 ಅಂಕ ಗಳಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು. ಸ್ವಯಂಸೇವಾ ಸಂಸ್ಥೆಯೊಂದು ಈ ಅಕಾಡೆಮಿ ಉಸ್ತುವಾರಿ ವಹಿಸಿದ್ದು, ಕಂಪ್ಯೂಟರ್ ಸಾಕ್ಷರತೆ ಜಾಗೃತಗೊಳಿಸುವುದು ಇದರ ಉದ್ದೇಶವಾಗಿದೆ. ಹೆಚ್ಚಿನ ವಿವರಗಳಿಗೆ ಈ ಅಂತರ್ಜಾಲದಲ್ಲಿ ಜಾಲಾಡಿ: http://bit.ly/2ViMxe











Click it and Unblock the Notifications