ವಿಜ್ಞಾನ ಶಿಕ್ಷಕ, ಸಂವಹಕರಿಗೆ ಪ್ರತಿಷ್ಠಿತ ಪ್ರಶಸ್ತಿ

Science communicator Sudhindra Haldodderi
ಬೆಂಗಳೂರು, ಮಾ. 19 : ಕಳೆದ 13 ವರ್ಷಗಳಿಂದ ವೈಜ್ಞಾನಿಕ ಸಂಗತಿಗಳನ್ನು ಸಾಮಾನ್ಯರಿಗೂ ಮನದಟ್ಟಾಗುವಂತೆ ಸರಳವಾಗಿ ಮತ್ತು ಅತ್ಯಂತ ವಿಶಿಷ್ಟ ರೀತಿಯಲ್ಲಿ ಬರೆಯುತ್ತಿರುವ ವಿಜ್ಞಾನಿ, ಲೇಖಕ ಪ್ರೊ. ಹಾಲ್ದೊಡ್ಡೇರಿ ಸುಧೀಂದ್ರ ಸೇರಿದಂತೆ ಏಳು ಜನ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಕರ್ನಾಟಕ ಸರಕಾರ ನೀಡುತ್ತಿರುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜ್ಞಾನ ಸಂವಹಕರಿಗೆ ಪ್ರಶಸ್ತಿ ನೀಡುತ್ತಿರುವುದು ಇದು ಮೊದಲನೆಯ ಬಾರಿ. ಮಾಹಿತಿ ತಂತ್ರಜ್ಞಾನ, ಬಯೋಟೆಕ್ನಾಲಜಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ. 2010-11 ಸಾಲಿಗೆ ವಿಜ್ಞಾನ ಶಿಕ್ಷಕರು ಮತ್ತು ಸಂವಹಕರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಫೆಬ್ರವರಿ 14, 2011ರಂದು ಕರ್ನಾಟಕ ಸರಕಾರದ ವಿಷನ್ ಗ್ರೂಪ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜೀಸ್ ನ ಉಪ ಸಮಿತಿ ಕೆಳಗಡೆ ನಮೂದಿಸಲಾಗಿರುವ ಸಾಧಕರಿಗೆ ಪ್ರಶಸ್ತಿ ನೀಡಬೇಕೆಂದು ಶಿಫಾರಸು ಮಾಡಿದೆ. ಪ್ರಶಸ್ತಿ 50 ಸಾವಿರ ರು. ನಗದನ್ನು ಒಳಗೊಂಡಿರುತ್ತದೆ. ಈ ವಿಷನ್ ಗ್ರೂಪ್ ಖ್ಯಾತ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರ ಅಧ್ಯಕ್ಷತೆಯಲ್ಲಿ 2008ರಲ್ಲಿ ಸ್ಥಾಪಿತವಾಯಿತು.

ಪ್ರಶಸ್ತಿ ಭಾಜನರು

1. ಅಜ್ಜಯ್ಯ ಟಿ, ವಿಜ್ಞಾನ ಶಿಕ್ಷಕ, ವಿಎಮ್ ಬಾಯ್ಸ್ ಹೈಸ್ಕೂಲ್, ಹುನಗುಂದ್, ಬಾಗಲಕೋಟೆ.

2. ಕೇಶವ್ ಎ. ಬುಲ್ ಬುಲೆ, ಅಸೋಸಿಯೇಟ್ ಪ್ರೊ. ಮತ್ತು ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ, ನಿಜಲಿಂಗಪ್ಪ ಕಾಲೇಜು, ರಾಜಾಜಿನಗರ, ಬೆಂಗಳೂರು.

3. ಎಚ್ಎಸ್ ನಿರಂಜನಾರಾಧ್ಯ, ಅಸೋಸಿಯೇಟ್ ಪ್ರೊ. ಜೀವಶಾಸ್ತ್ರಿ, ಶ್ರೀ ಸಿದ್ದಗಂಗಾ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಫಾರ್ ಬಾಯ್ಸ್, ಬಿಎಚ್ ರೋಡ್, ತುಮಕೂರು.

4. ಟಿಆರ್ ಅನಂತರಾಮು, ಕುಮಾರಸ್ವಾಮಿ ಬಡಾವಣೆ, ಮೊದಲನೇ ಹಂತ, ಬೆಂಗಳುರು.

5. ಸುಧೀಂದ್ರ ಹಾಲ್ದೊಡ್ಡೇರಿ, ಪ್ರೊ. ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗ, ಭಗವಾನ್ ಮಹಾವೀರ್ ಕಾಲೇಜ್ ಆಫ್ ಇಂಜಿನಿಯರಿಂಗ್, ಜಕ್ಕಸಂದ್ರ ಪೋಸ್ಟ್, ಕನಕಪುರ.

6. ಎಂ ಅಬ್ದುಲ್ ರೆಹಮಾನ್ ಪಾಶಾ, ಶಿವನಗರ, ಬೆಂಗಳೂರು.

7. ಸಾತನೂರ ದೇವರಾಜ್ ಯು., ಕೆಎಚ್ ಬಿ ಕಾಲೋನಿ, ಹೂಟಗಲ್ಲಿ, ಮೈಸೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+