ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ

ಕಳೆದ ವರ್ಷಕ್ಕೆ ಹೋಲಿಸಿದರೆ 28 ಸಾವಿರ ಕಡಿಮೆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಕಳೆದ ವರ್ಷ 6.52 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದರು. ಪಾಸ್ ಆಗುವವರ ಪ್ರಮಾಣ ಹೆಚ್ಚಾಗಿದ್ದರಿಂದ (ಶೇ.6) ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15 ಮತ್ತು ಮಧ್ಯಾಹ್ನ 2ರಿಂದ 5.15 ಕಾಲಾವಧಿಯಲ್ಲಿ ಪರೀಕ್ಷೆ ಜರುಗಲಿವೆ. ಪ್ರಶ್ನೆ ಪತ್ರಿಕೆ ಅರಿತುಕೊಳ್ಳಲೆಂದು ಪರೀಕ್ಷೆ ಪ್ರಾರಂಭವಾಗುತ್ತಿದ್ದಂತೆ 15 ನಿಮಿಷಗಳ ಹೆಚ್ಚುವರಿ ಕಾಲಾವಧಿ ನೀಡಲಾಗಿದೆ. 23ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಮನಶಾಸ್ತ್ರ ಹಾಗು 29ರಂದು ಉರ್ದು ಹೊರತುಪಡಿಸಿ ಎಲ್ಲ ಪರೀಕ್ಷೆಗಳು ಬೆಳಗ್ಗೆ ಆರಂಭವಾಗುತ್ತಿವೆ.
ಗುರುವಾರ ರಸಾಯನ ಶಾಸ್ತ್ರ ಮತ್ತು ಬಿಜಿನೆಸ್ ಸ್ಟಡೀಸ್ ಪರೀಕ್ಷೆ ಇದ್ದು, ಶುಕ್ರವಾರ ಕನ್ನಡ, ತಮಿಳು, ಮಲಯಾಳಂ, ಮರಾಠಿ, ಅರೇಬಿಕ್ ಮತ್ತು ಫ್ರೆಂಚ್ ಭಾಷಾ ಪರೀಕ್ಷೆಗೆ ವಿದ್ಯಾರ್ಥಿಗಳು ಕುಳಿತುಕೊಳ್ಳಲಿದ್ದಾರೆ. [ಪರೀಕ್ಷಾ ವೇಳಾಪಟ್ಟಿ]
ಅಕ್ರಮ ತಡೆಯಲು ಕ್ರಮ : ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಂದ ಅಕ್ರಮ ಜರುಗದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಜಾಗೃತ ದಳ ರಚಿಸಿದೆ. ಯಾವುದೇ ಅಕ್ರಮ ನಡೆಯದಂತೆ ತಡೆಗಟ್ಟಲು ಆಯಾ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅಕ್ರಮ ಜರುಗಿದರೆ, ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಆರ್ ಬಸವರಾಜಪ್ಪ 96630 92522 ಸಂಖ್ಯೆಗೆ ದೂರು ನೀಡಬಹುದು.
ಹಾಗೆಯೆ, ಪ್ರವೇಶ ಪರೀಕ್ಷೆ ಮರೆಯದೆ ತರಲು ಮತ್ತು ಮೊಬೈಲನ್ನು ಮನೆಯಲ್ಲೇ ಮರೆತುಬರಲು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಹಾಳೆಗಳಿಗೂ ನೊಂದಣಿ ಸಂಖ್ಯೆ ನಮೂದಿಸಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಪಾಲಕರೇ ನಿಮ್ಮ ಜವಾಬ್ದಾರಿ : ನಿಮ್ಮಮಕ್ಕಳ ಮನಸ್ಸುಪ್ರಫುಲ್ಲವಾಗಿರುವಂತೆ ನೋಡಿಕೊಳ್ಳಿ. ಪ್ರವೇಶ ಪತ್ರ, ಬರೆಯಲು ಅಗತ್ಯವಾಗಿ ಬೇಕಾಗಿರುವ ಸಾಮಗ್ರಿಗಳು ಸರಿಯಾಗಿವೆಯೇ ಇಲ್ಲವೆ ಎಂಬುದರತ್ತ ಗಮನಹರಿಸಿ. ಪರೀಕ್ಷೆಗೆ ಹೋಗುವ ಮೊದಲು ತಿಂಡಿ ತಿನ್ನಿಸಿ ಕಳಿಸಿ. ಪರೀಕ್ಷೆ ಸರಿಯಾಗಿ ಬರೆಯದಿದ್ದರೆ ಅಪ್ಪಿತಪ್ಪಿಯೂ ಗದರಿಸಬೇಡಿ, ಜಗತ್ತೇನು ಮುಳುಗಿಹೋಗುವುದಿಲ್ಲ. ಪರೀಕ್ಷೆ ಮುಗಿಯುವವರೆಗೆ ಕೆಲಸ ಭೊಗಸಿ ಒತ್ತಟ್ಟಿಗಿಟ್ಟು ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಿ. ಆಲ್ ದಿ ಬೆಸ್ಟ್.











Click it and Unblock the Notifications