ಶಿರೀಶ ನನ್ನನ್ನು ಹೊಡೆದು ಬಡಿದು ಮಾಡುತ್ತಿದ್ದ: ಶ್ರೀಜಾ
ಹೈದರಾಬಾದ್
, ಮಾ. 16: 'ನನ್ನ ಗಂಡ ಶಿರೀಶ್ ಭಾರದ್ವಾಜ್ ನನ್ನನ್ನು ಹೊಡೆದು ಬಡಿದು ಮಾಡುತ್ತಿದ್ದ. ಅವನ ತಾಯಿ ಜಿ.ಆರ್. ಸೂರ್ಯಮಂಗಳ ಸಹ ನನಗೆ ಬಡಿದಿದ್ದಾಳೆ. ಅದನ್ನೆಲ್ಲ ತಕ್ಷಣ ನನ್ನ ಅಪ್ಪನಿಗೆ ಎಸ್ಎಂಎಸ್ ಮತ್ತು ಇಮೇಲ್ ಮಾಡಿ ತಿಳಿಸುತ್ತಿದ್ದೆ' ಎಂದು ಶ್ರೀಜಾ ಭಾರವಾದ ಹೃದಯದೊಂದಿಗೆ ಪೊಲೀಸರಲ್ಲಿ ಹೇಳಿಕೊಂಡಿದ್ದಾಳೆ. ಗಮನಾರ್ಹವೆಂದರೆ ಶ್ರೀಜಾ ತನ್ನ ಮಾವನ ಬಗ್ಗೆ ದೂರು ನೀಡಿಲ್ಲ. ಆತ ದೇವರಂತಹ ಮನುಷ್ಯ ಎಂದು ತಿಳಿಸಿದ್ದಾಳೆ. ಅಂದಹಾಗೆ ಶ್ರೀಜಾ, ಪ್ರಜಾರಾಜ್ಯಂ ಪಕ್ಷದ ನಾಯಕ ಮತ್ತು ತೆಲುಗು ನಟ ಕೆ. ಚಿರಂಜೀವಿ ಅವರ ಕಿರಿಯ ಪುತ್ರಿ. id="toptextpromo">'ಒಂದು
ಸಲ ಶಿರೀಶ ನನ್ನ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಅಗ ನಾನು ಗಾಯಗೊಂಡೆ. ಅತ್ತೆ ಮಂಗಳಮ್ಮ ಕಾಲಿನಿಂದ ನನಗೆ ಒದೆಯುತ್ತಿದ್ದಳು. ದಿನಾ ದನಕ್ಕೆ ಬಡಿದಂಗೆ ನನಗೆ ಬಡಿಯುತ್ತಿದ್ದರು. ಒಮ್ಮೆ ನನ್ನ ಪುಟ್ಟ ಮಗಳನ್ನು ಬಚ್ಚಿಟ್ಟಿದ್ದರು ಎಂದು ಶ್ರೀಜಾ ದೂರಿನಲ್ಲಿ ದಾಖಲಿಸಿದ್ದಾಳೆ. 'ಶ್ರೀಜಾ ಆತಂಕಕ್ಕೊಳಗಾಗಿದ್ದಾಳೆ. ಆದ್ದರಿಂದ ತನಿಖೆಯನ್ನು ತೀವ್ರಗೊಳಿಸಿದ್ದೇವೆ. ನಮ್ಮ ಇನ್ಸ್ ಪೆಕ್ಟರ್ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ' ಎಂದು ಪೊಲೀಸ್ ಉಪ ಆಯುಕ್ತ ಜೆ. ಸತ್ಯನಾರಾಯಣ ಬುಧವಾರ ತಿಳಿಸಿದ್ದಾರೆ. ಶ್ರೀಜಾ ತಲೆಗೆ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ವೈದ್ಯಕೀಯ ವರದಿಗಳನ್ನೂ ಪೊಲೀಸರು ತರಿಸಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪೊಲೀಸರು
ಪ್ರಕರಣ ದಾಖಲಿಸಿಕೊಂಡಿದ್ದು, ಭಾರದ್ವಾಜ್ ಮತ್ತು ಅವನ ತಾಯಿಯ ವಿರುದ್ಧ ಕೇಸು ಜಡಿದಿದ್ದಾರೆ. ನಗರದ ಸೆಂಟ್ರಲ್ ಕ್ರೈಂ ಸ್ಟೇಷನ್-ನ ಮಹಿಳಾ ಪೊಲೀಸರು ಎಸ್ಎಂಎಸ್, ಇಮೇಲ್ ಮುಂತಾಧ ಸಾಕ್ಷ್ಯಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಗಂಡನ ಇರಾದೆ ಅರಿಯುತ್ತಿದ್ದಂತೆ ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲ ಮದುವೆಯಾದ ಕೆಲವೇ ದಿನಗಳ ಬಳಿಕ ಅಪ್ಪನ ಹೆಸರಿಗೆ ವರ್ಗಾಯಿಸಿದ್ದೆ ಎಂದು ಶ್ರೀಜಾ ತಿಳಿಸಿದ್ದಳು. ಆ ಬಗ್ಗೆಯೂ ಪೊಲೀಸರು ದಾಖಲೆಗಳನ್ನು ಸಂಗ್ರಹಿಸತೊಡಗಿದ್ದಾರೆ. ಪ್ರಕಣದಲ್ಲಿ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.











Click it and Unblock the Notifications