ಚನ್ನಪಟ್ಟಣದಲ್ಲಿ ಗೆಲ್ಲಿ ಮಂತ್ರಿಯಾಗಿ, ಬಿಜೆಪಿ ಓಪನ್ ಆಫರ್

CP Yogishwar BJP BY Poll candidate
ಬೆಂಗಳೂರು ಮಾ.16: ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಎಪ್ರಿಲ್ 9ರಂದು ನಡೆಯಲಿರುವ ಮಿನಿ ಸಮರಕ್ಕೆ ಸಮರ್ಥ ಯೋಧರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಚನ್ನಪಟ್ಟಣದಿಂದ ಮಾಜಿ ಎಂಎಲ್ ಎ ಸಿಪಿ ಯೋಗೀಶ್ವರ್, ಬಂಗಾರಪೇಟೆಯಿಂದ ಎಂ ನಾರಾಯಣ ಸ್ವಾಮಿ ಹಾಗೂ ಜಗಳೂರಿನಿಂದ ಎಸ್ ವಿ ರಾಮಚಂದ್ರ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಕರ್ನಾಟಕ ಬಿಜೆಪಿ ಇಂದು ಪ್ರಕಟಿಸಿದೆ. ಇದರ ಮಧ್ಯೆ ಮುಖ್ಯವಾಗಿ ಚನ್ನಪಟ್ಟಣ ಕ್ಷೇತ್ರವನ್ನು ಶತಾಯುಗತಾಯು ಗೆಲ್ಲಲೇ ಬೇಕೆನ್ನುವ ಹಠಕ್ಕೆ ಆಡಳಿತರೂಢ ಬಿಜೆಪಿ ಬಿದ್ದಿದೆ. ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸಂಭಾವ್ಯ ಅಭ್ಯರ್ಥಿಯಾಗಿರುವುದರಿಂದ ಅವರ ವಿರುದ್ಧ ಗೆಲ್ಲುವ ಬಿಜೆಪಿಗೆ ಅಭ್ಯರ್ಥಿಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಬಿಜೆಪಿ ಓಪನ್ ಆಫರ್ ನೀಡಿದೆ.

ಕುಮಾರಸ್ವಾಮಿ ಕಣಕ್ಕಿಳೀಯುತ್ತಾರೆನ್ನುವ ಸುದ್ದಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹೊಸ ಸೂತ್ರ, ದಾಳ ಉರುಳಿಸುತ್ತಿದೆ. ಒಂದು ವೇಳೆ ಎಚ್ಡಿಕೆ ವಿರುದ್ದ ಯಾರೇ ನಿಂತು ಗೆದ್ದರೂ ಮಂತ್ರಿ ಪದವಿ ಗ್ಯಾರಂಟಿ ಎನ್ನುವ ಮಾತು ಬಿಜೆಪಿ ರಾಜ್ಯಾಧ್ಯಕ್ಷರ ಕಡೆಯವರಿಂದ ಹರಿದು ಬಂದಿರುವ ಹೊಸ ಆಮೀಷ.

ಯೋಗಿ ಯೋಗಾಯೋಗ: ಮುಖ್ಯಮಂತ್ರಿಯ ಹಿಂದೆ ಮುಂದೆ ಸುತ್ತುತ್ತಾ ಟಿಕೆಟ್ ಆಕಾಂಕ್ಷಿಗಳ ಪೈಕಿ ಮಂಚೂಣಿಯಲ್ಲಿದ್ದ ಸಿಪಿ ಯೋಗೀಶ್ವರ್ ಕಡೆಗೂ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಇನ್ನೊಂದೆಡೆ ಕುಮಾರಸ್ವಾಮಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ದೂರಾಲೋಚನೆಯನ್ನು ಯೋಗೀಶ್ವರ್ ಮಾಡಿದ್ದಾರೆ. ಒಂದು ರೀತಿ ಎರಡು ದೋಣಿಗಳ ಮೇಲೆ ಕಾಲಿಟ್ಟು ಪಯಣಿಸುವ ಯೋಚನೆ ಮಾಡುತ್ತಿದ್ದಾರೆ. ಆದರೆ ಪಕ್ಷ ಈಗಾಗಲೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಗೊಳಿಸಿ ಪ್ರಕಟಿಸಿರುವುದರಿಂದ ಯೋಗಿ ಕಣ್ಣು ಸಚಿವ ಸ್ಥಾನದತ್ತ ನೆಟ್ಟಿದೆ.

ಒಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಗೆಲುವಿಗಾಗಿ ಎಲ್ಲ ರೀತಿ ಹೋರಾಟಕ್ಕೂ ಸಿದ್ಧವಾಗಿದೆ. ಆದರೆ, ಬಿಜೆಪಿ ರಣತಂತ್ರ ಎಷ್ಟರ ಮಟ್ಟಿಗೆ ಫಲಿಸುತ್ತದೆ ಅಥವಾ ತಿರುಗುಬಾಣ ವಾಗಲಿದೆಯೇ ಎನ್ನುವುದನ್ನು ಕ್ಷೇತ್ರದ ಜನತೆ ನಿರ್ಧರಿಸಲಿದ್ದಾರೆ. ಮೇ 13 ರಂದು ಫಲಿತಾಂಶ ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ. ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದ ಸಿಪಿ ಯೋಗೀಶ್ವರ್ ಗೆ ಸುವರ್ಣಾವಕಾಶ ಒದಗಿ ಬಂದಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+