2ಜಿ ಹಗರಣ: ಎ ರಾಜಾ ಬಂಟ ಬಚ್ಚಾ ಆತ್ಮಹತ್ಯೆ

ಇಂದು ಮಧ್ಯಾಹ್ನ 2.30ಕ್ಕೆ ದೆಹಲಿ ವಿಮಾನ ಏರಿ ಸಿಬಿಐ ಮುಂದೆ ವಿಚಾರಣೆಗೆ ಕೂರಬೇಕಿದ್ದ ಬಚ್ಚಾ, ವನ್ನಿಯ ಟೆಯ್ನಂಪೇಟ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರೀಮ್ಸ್ ರಸ್ತೆಯಲ್ಲಿರುವ ಅಪೊಲೊ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಹೆಚ್ಚಿನ ವಿವರಗಳು ತಿಳಿದು ಬರಲಿದೆ ಎಂದು ಚೆನ್ನೈನ ಪೊಲೀಸ್ ಆಯುಕ್ತ ಹೇಳಿದ್ದಾರೆ.
ಎ ರಾಜಾ ಕಡೆಯಿಂದ ಹರಿದು ಬರುತ್ತಿದ್ದ ಅಪಾರ ಭ್ರಷ್ಟಾಚಾರದ ಹಣವನ್ನು ಗ್ರೀನ್ ಹೌಸ್ ಪ್ರೊಮೋಟರ್ಸ್ ಎಂಬ ಸಂಸ್ಥೆಯ ಮೂಲಕ ಭದ್ರಪಡಿಸುವುದು ಬಚ್ಚಾ ಕೆಲಸವಾಗಿತ್ತು. ಪ್ರಮುಖ ಟೆಲಿಕಾಂ ಕಂಪೆನಿಗಳಿಂದ ಪಡೆದ ಲಂಚದ ಹಣ ಇಲ್ಲಿ ತೊಡಗಿಸಲಾಗಿತ್ತು ಎಂದು ಹೇಳಲಾಗಿದೆ. ಎ ರಾಜಾ ಅವರ ಪತ್ನಿ ಎಂಎ ಪರಮೇಶ್ವರಿ ಅವರು ಈ ಕಂಪೆನಿಯ ನಿರ್ದೇಶಕಿಯಾಗಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ 2ಜಿ ಹಗರಣದಲ್ಲಿ ಎ ರಾಜಾ ಅವರ ಆಪ್ತರ ಕೈವಾಡದ ಬಗ್ಗೆ ಸಿಬಿಐ ತನಿಖೆ ನಡೆಸುವಾಗ ಬಚ್ಚಾನ ಹೆಸರು ಪಟ್ಟಿಯಲ್ಲಿ ಸೇರಿತ್ತು.
ಎ ರಾಜಾ ಹಾಗೂ ಬಚ್ಚಾ ಒಂದೇ ಕ್ಷೇತ್ರದಿಂದ ಬಂದವರಾಗಿದ್ದು, ಕೂಲಿಯಿಂದ ಕೋಟ್ಯಾಧಿಪತಿ ಎಂಬ ಮಾತಿಗೆ ಜೀವಂತ ಕಥಾವಸ್ತುಗಳಾಗಿದ್ದವರು. ಸೀರೆ ವ್ಯಾಪಾರದಿಂದ ಆರಂಭವಾದ ಕಥೆ 2000 ಕೋಟಿ ಮೌಲ್ಯ ತೂಗುವ ಧನಿಕರಾಗುವವರೆಗೂ ಹರಿಯುತ್ತದೆ. ಕೊನೆಗೆ ಹಗರಣದಲ್ಲಿ ಸಿಲುಕಿ ತನಿಖೆ ಆರಂಭವಾಗಿ ಇಬ್ಬರು ಗೆಳೆಯರ ಅಧಃಪತನ ಆರಂಭವಾಗುತ್ತದೆ.












Click it and Unblock the Notifications