ಗೋಮಾಂಸ ಮಾರಾಟ, ಬಜರಂಗಿಗಳ ದಾಳಿ

ಚಿಕ್ಕಮಗಳೂರು ನಗರದಲ್ಲಿ ಅಕ್ರಮ ಕಸಾಯಿಖಾನೆ, ಗೋಮಾಂಸ ನಡೆಸುತ್ತಿರುವವರ ಮೇಲೆ ಕಳೆದ ಎರಡು ಮೂರು ವರ್ಷಗಳಿಂದ ತೀವ್ರ ನಿಗಾ ಇಟ್ಟಿರುವ ಬಜರಂಗಿಗಳು, ಸುಮಾರು 60ಕ್ಕೂ ಹೆಚ್ಚು ಅಕ್ರಮ ಅಂಗಡಿಗಳನ್ನು ಈ ಹಿಂದೆ ಮುಚ್ಚಿಸಿದ್ದರು. ಈಗ ಮತ್ತೆ ಅದೇ ವಾಸನೆ ಜಾಡು ಹಿಡಿದು ಹೊರಟಬಜರಂಗ ದಳದ ಕಾರ್ಯಕರ್ತರಾದ ಪ್ರದೀಪ್ ಕುಮಾರ್ ಶಾಂತಿ, ರಘು, ಪುರುಷೋತ್ತಮ ಹಾಗೂ ರೀತು ಎಂಬವರು ಅಂಡೆಛತ್ರದ ಮುಹಮ್ಮದ್ ಖಾನ್ ಗಲ್ಲಿಯಲ್ಲಿರುವ ಫೈರೋಝ್ ಮತ್ತು ಅಮ್ಜದ್ ಎಂಬವರಿಗೆ ಸೇರಿದ ಅಂಗಡಿಗೆ ನುಗ್ಗಿ ಅಂಗಡಿಗಳನ್ನು ಮುಚ್ಚಲು ತಿಳಿಸಿದ್ದಾರೆ. ಆದರೆ, ಅಂಗಡಿಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಜಗಳ ಪ್ರಕೋಪ ತಿರುಗಿದ ಸಮಯದಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚಿಲಾಗಿದೆ. ನಂತರ ಎರಡು ತಂಡಗಳ ನಡುವೆ ಘರ್ಷಣೆ ಜೋರಾಗಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಯಿಂದ ಶಾಂತಿ, ರಘು, ಪುರುಷೋತ್ತಮ ಹಾಗೂ ರೀತು ಎಂಬವರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಗೆ ಸಂಬಂಧಿಸಿ ಎರಡೂ ಗುಂಪುಗಳ 8 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಮ್ಜದ್, ಜಾವೇದ್, ದೇವು ಸುಭೋಷ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ವಿಕಾಸ್ ಕುಮಾರ್, ಡಿವೈಎಫ್ ವೇದಮೂರ್ತಿ, ಸರ್ಕಲ್ ಇನ್ಸ್‌ಪೆಕ್ಟರ್ ವಿಜಯ ಪ್ರಸಾದ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದು, ಶಾಂತಿ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.












Click it and Unblock the Notifications