ಪೆಟ್ರೋಲ್ ಕದಿಯುವ ಐನಾತಿ ಕಳ್ಳರು ಬಲೆಗೆ
ಚಿಕ್ಕಮಗಳೂರು,
ಮಾ.10: ಮಂಗಳೂರು-ಬೆಂಗಳೂರು ಪೆಟ್ರೋಲಿಯಂ ಪೈಪ್ ಲೈನ್ ಕೊರೆದು ಪೆಟೋಲ್ ಕಳ್ಳತನ ಮಾಡುತ್ತಿದ್ದ ಐನಾತಿ ಗ್ಯಾಂಗ್ ನ ಮೂವರನ್ನು ಬಂಧಿಸುವಲ್ಲಿ ಗೋಣಿಬೀಡು ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಡಿಗೆರೆಯ ಹಿರೇಶಿಗರ ಬಳಿ ಎಂಆರ್ ಪಿಎಲ್ ಕಂಪೆನಿಗೆ ಸೇರಿದ ಪೈಪ್ ಲೈನ್ ಕೊರೆದಿದ್ದ ತಂಡವನ್ನು ಕಳೆದ 15 ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಈ ಪೈಕಿ ಮೂವರು ತಲೆಮರೆಸಿಕೊಂಡಿದ್ದರು. ಎಸ್‌ಐ ಗುರುಪ್ರಸಾದ್ ಅವರಿದ್ದ ವಿಶೇಷ ತಂಡ ಬುಧವಾರ ಮೂವರನ್ನು ಸೆರೆ ಹಿಡಿದಿದೆ. id="toptextpromo">ಬಂಧನಕ್ಕೊಳಗಾದವರನ್ನು
ಕಾಂತರಾಜು, ವಿಜಯ್ ಕುಮಾರ್ ಮತ್ತು ಸುರೇಶ ಎಂದು ಗುರುತಿಸಲಾಗಿದೆ. ಮಂಗಳೂರು ಬಂದರಿನಿಂದ ಬೆಂಗಳೂರಿನವರೆಗೆ ಪೆಟ್ರೋಲ್ ಮತ್ತು ಡಿಸೇಲ್ ಸಾಗಿಸುತ್ತಿದ್ದ ಎಂಆರ್‌ಪಿಎಲ್ ಪೈಪ್‌ಲೈನ್ ಕೊರೆದು ಪೆಟ್ರೋಲ್ ಕಳ್ಳತನ ನಡೆಸುತ್ತಿದ್ದ ಪ್ರಕರಣ ಕಳೆದ 15 ದಿನಗಳ ಹಿಂದೆ ಪತ್ತೆಯಾಗಿತ್ತು.ಸುಮಾರು 14 ಲಕ್ಷ ರೂ.ಗೆ ಅಧಿಕ ಮೌಲ್ಯದ ಇಂಧನ ಕಳುವಾಗಿದೆ ಎಂದು ಕಂಪೆನಿಯ ಇಂಜಿನಿಯರ್ ಪ್ರಸಾದ್ ಎಂಬವರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದರು. id='are-slot-1' class='oiad oi-axt oiadv'> id='top-searched-articles'>ಆದರೆ
ಅಲ್ಲಿನ ಪಿಎಸ್‌ಐ ಸುನೀಲ್ ಕುಮಾರ್ ಸಮರ್ಪಕವಾಗಿ ಸ್ಪಂದಿಸದ ಕಾರಣ ಅವರು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಸುನೀಲ್ ಕುಮಾರ್ ಅಮಾನತು ಮಾಡಿ, ಎಸ್ ಐ ಗುರುಪ್ರಸಾದ್ ಅವರ ತಂಡವನ್ನು ತನಿಖೆಗೆ ನೇಮಿಸಲಾಯಿತು. ಈ ಬಗ್ಗೆ ಪೊಲೀಸರು 14 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ರಾಜುಶೆಟ್ಟಿ, ರಾಜು, ತುಳಸಿ ಪ್ರಸಾದ್, ಪಾಂಡು, ಮುರಳಿ, ಎಂಆರ್‌ಪಿಎಲ್ ಎಂಜಿನಿಯರ್ ಪ್ರಕಾಶ್ ಹಾಗೂ ಹರೀಶ್ ತಲೆಮರೆಸಿಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ, ಗೌಡಹಳ್ಳಿ, ಹುರುಡಿ ಮುಂತಾದ ಗ್ರಾಮಗಳಲ್ಲಿ ಈ ತಂಡ ಪೆಟ್ರೋಲ್ ಕಳ್ಳತನ ಮಾಡುತ್ತಿತ್ತು ಎಂದು ಎಸ್ ಐ ಗುರುಪ್ರಸಾದ್ ಹೇಳಿದರು.











Click it and Unblock the Notifications