ಸರ್ಜರಿ ಮೇಲ್ ತೆರಿಗೆ, ರೋಗಿ ಸಂಕಷ್ಟಕ್ಕೆ: ಡಾ.ದೇವಿಶೆಟ್ಟಿ

ಈ ಹೆಚ್ಚು'ವರಿ' ತೆರಿಗೆಯನ್ನು 'ದುಃಖದಾಯಕ ತೆರಿಗೆ' ಎಂದು ಬಣ್ಣಿಸಿರುವ ಅವರು ಇದನ್ನು ವಿರೋಧಿಸಿ ಮಾರ್ಚ್ 12 ರಂದು 'ಸಂಕಷ್ಟ ದಿನ' ಆಚರಿಸಲು ನಿರ್ಧರಿಸಿದ್ದಾರೆ. ಜತೆಗೆ, ಈ ಪ್ರಸ್ತಾವಿತ ತೆರಿಗೆಯನ್ನು ಕೈಬಿಡಬೇಕೆಂದು ಆಗ್ರಹಿಸಿ ಸಾರ್ವಜನಿಕರು ಮಾರ್ಚ್ 12ರಂದು ರಾಜ್ಯಪಾಲರ ನಿವಾಸದ ಎದುರು ಸಭೆ ಸೇರುವಂತೆ ಡಾ. ದೇವಿಶೆಟ್ಟಿ ಮನವಿ ಮಾಡಿದ್ದಾರೆ.
'ಪಸ್ತಾವಿತ ತೆರಿಗೆ ಜಾರಿಗೆ ಬಂದರೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ರೋಗಿ 5,000ದಿಂದ 10,000 ರು. ಹೆಚ್ಚಿಗೆ ಪಾವತಿಸಬೇಕಾಗುತ್ತದೆ. ಇನ್ನು ಕ್ಯಾನ್ಸರ್ ರೋಗಿಗಳು ಕನಿಷ್ಠ 20,000 ರು. ಹೆಚ್ಚುವರಿಯಾಗಿ ಖರ್ಚು ಮಾಡಬೇಕಾಗುತ್ತದೆ' ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಅವರು ಹೊಸ ತೆರಿಗೆಯ ಲೆಕ್ಕಾಚಾರವನ್ನು ಬಿಡಿಸಿಟ್ಟಿದ್ದಾರೆ.
ಹೊಸ ತೆರಿಗೆ ನೀತಿ ಹವಾನಿಯಂತ್ರಿತ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಏರ್ ಕಂಡೀಷನ್ ಇಲ್ಲದೆ ಆಪರೇಷನ್ ಥಿಯೇಟರ್ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯ? ಅದು ಸರಳವೋ. ಸಂಕಷ್ಟವೋ ಏರ್ ಕಂಡೀಷನ್ ಇಲ್ಲದೆ ಯಾವುದೇ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವೇ ಇಲ್ಲ. ಇನ್ನು, ಏರ್ ಕಂಡೀಷನ್ ಇಲ್ಲದಿದ್ದರೆ ಬ್ಲಡ್ ಬ್ಯಾಂಕ್ ಸ್ಥಾಪಿಸುವುದಕ್ಕೂ ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದ್ದರಿಂದ ಹೊಸ ತೆರಿಗೆ ಶ್ರೀಮಂತ ರೋಗಿಗಳನ್ನು ಮಾತ್ರ ಬಾಧಿಸುತ್ತದೆ ಎಂಬ ತಿಳಿವಳಿಕೆ ತಪ್ಪು ಎಂದು ಅವರು ಗಮನ ಸೆಳೆದಿದ್ದಾರೆ.












Click it and Unblock the Notifications