ಬಿರುಸಿನ ನಡೆಯ ಯುವರಾಜ ರಾಹುಲ್ ಎಲ್ಲೋದ?

Rahul Gandhi
ನವದೆಹಲಿ, ಮಾ.1: ಕೊಡಗಿನ ಖಾಸಗಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆದು ಉತ್ತರಕ್ಕೆ ಮರಳಿದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ನಾಪತ್ತೆ. ಕೆಲ ದಿನಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಬಜೆಟ್ ಅಧಿವೇಶನಕ್ಕೂ ಹಾಜರಾಗದೆ ಇರುವಂಥ ಕಾರಣ ಏನಿರಬಹುದು ಎಂಬ ಪ್ರಶ್ನೆ ಎದ್ದಿದೆ. ರಾಹುಲ್ ಕಾಲ ಮೂಳೆ ಮುರಿದಿದೆ ಎಂಬ ಸುದ್ದಿ ಇದ್ದರೂ, ಬಜೆಟ್ ಅಧಿವೇಶನಕ್ಕೆ ತಳ್ಳು ಕುರ್ಚಿಯಲ್ಲಿ ಬರಬಹುದಿತ್ತಲ್ಲ ಎಂದು ಕೇಳುವವರಿದ್ದಾರೆ. ಸದ್ಯಕ್ಕಂತೂ ರಾಹುಲ್ ತಮ್ಮ ವಿಶ್ರಾಂತಿ ಸುಖವನ್ನು ಅನುಭವಿಸುತ್ತಿದಾರೆ.

ಸಂಸತ್ತಿನ ಯಾವುದೇ ಪ್ರಮುಖ ಕಲಾಪಕ್ಕೂ ಗೈರು ಹಾಜರಾಗದೆ ತಪ್ಪದೇ ಹಾಜರಾಗುವ ರೂಢಿಯನ್ನು ರಾಹುಲ್ ಬೆಳೆಸಿಕೊಂಡಿದ್ದರು. ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಅವರು ಸೋಮವಾರ ಕೇಂದ್ರ ಬಜೆಟ್ ಮಂಡನೆ ಸಮಯದಲ್ಲಿ ಸಂಸತ್ ಸದನದಲ್ಲಿ ಇಲ್ಲದಿರುವುದು ಎದ್ದು ಕಾಣುತ್ತಿತ್ತು. ಸದನಕ್ಕೂ ಬರಲಾಗದಷ್ಟು ಕಾಲು ಮುರಿದಿದೆಯೇ ಎಂದು ರಾಹುಲ್ ಆರೋಗ್ಯದ ಬಗ್ಗೆ ಚೂರು ಪಾರು ಸುದಿ ತಿಳಿದಿದ್ದ ಕೆಲ ರಾಜಕಾರಣಿಗಳು ತಮ್ಮ ತಮ್ಮಲ್ಲೇ ಪ್ರಶ್ನಿಸಿಕೊಂಡಿದ್ದರು.

ರಾಹುಲ್ ಗಾಂಧಿ ಅವರ ಆಪ್ತ ವೈದ್ಯರ ಪ್ರಕಾರ ರಾಹುಲ್ ಅವರು ರೈಲ್ವೇ ಬಜೆಟ್ ಕಲಾಪದಲ್ಲಿ ಪಾಲ್ಗೊಂಡ ನಂತರ ಕಾಲು ನೋವು ಎಂದರು. ಅವರ ಕಾಲಿನ ಎಕ್ಸ್ ರೇ ಪರೀಕ್ಷೆ ನಂತರ ಬಲಗಾಲಿನ ಮೂಳೆ ಮುರಿದಿರುವುದು ದೃಢಪಟ್ಟಿದೆ. ಅವರಿಗೆ ನಾಲ್ಕು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಸೂಚಿಸಿದ್ದೇವೆ ಎಂದಿದ್ದಾರೆ.

ಆದರೆ, ರಾಹುಲ್ ಕಾಲಿಗೆ ಗಾಯವಾದದ್ದು ಎಲ್ಲಿ, ಬಿರುಸಿನ ನಡೆಗೆ ಹೆಸರುವಾಸಿಯಾದ ರಾಹುಲ್ ವ್ಯಾಯಾಮ ಮಾಡುವ ವೇಳೆ ಮೂಳೆ ಮುರಿದುಕೊಂಡಿದ್ದಾರೆ ಎನ್ನುವುದು ನಂಬುವುದಕ್ಕೆ ಕಷ್ಟ. ಕೊಡಗಿನಲ್ಲಿ ಫೆ. 16 ರಿಂದ 20ರವರೆಗೂ ಆಡಿ ನಲಿದು ಕುಣಿದ ರಾಹುಲ್ ಹೊರಟುವ ಮುನ್ನ ಕೊಡಗಿನ ಅಮ್ಮತಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಆದರೆ, ಯಾವ ಕಾರಣಕ್ಕೆ ಎಂಬುದು ಬಹಿರಂಗವಾಗಿರಲಿಲ್ಲ. ರಾಹುಲ್ ಗೆ ಕಾಲು ನೋವು ಹಳೆಯದೇ ಅಥವಾ ದೆಹಲಿಯಲ್ಲಿ ವ್ಯಾಯಾಮ ಮಾಡುವಾಗ ಹೊಸದಾಗಿ ಮುರಿದಿದ್ದೇ ಎಂಬುದು ಸದ್ಯದ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+