ಚಾಲಕನ ಮೇಲೆ ಕುಸ್ತಿಗಿಳಿದ ಸಚಿವ ಬೆಳಮಗಿ ಮಗ
ಗುಲಬರ್ಗ,
ಮಾರ್ಚ್ 2: ಶಿಕ್ಷಣ ಸಚಿವ ರೇವೂನಾಯಕ್ ಬೆಳಮಗಿ ಗೊತ್ತಲ್ಲ. ಅದೇ ಅಪ್ಪಟ ದೇಶೀ ಕುಸ್ತಿಪಟು. ಅವರೇನೋ ಕಣದಲ್ಲಿ ಆಗಾಗ ಸಾತ್ವಿಕ ತಾಲೀಮು ಮಾಡುತ್ತಿರುತ್ತಾರೆ. ಆದರೆ ಇದೆಂತಹುದು? ಅವರ ಮಗ ರೋಡಿನಲ್ಲಿ ಕುಸ್ತಿಗಿಳಿದಿದ್ದು. ಅದೂ ಸಚಿವರ ಮಗನಾಗಿ ಸರಕಾರಿ ಸಾರಿಗೆ ಸಂಸ್ಥೆಯ ಚಾಲಕನ ಮೇಲೆ ಕುಸ್ತಿಗಿಳಿದು, ಸರಕಾರಿ ಸ್ವತ್ತಿಗೇ ಕಲ್ಲೇಟು ಹೊಡೆದಿರುವುದು! id="toptextpromo">ಏನಾಯಿತೆಂದರೆ
ಗುಲ್ಬರ್ಗದ ಜೇವರ್ಗಿ ಕಾಲನಿ ಬಳಿ ಸಚಿವರ ಪುತ್ರ ವಸಂತ ಮಂಗಳವಾರ ರಾತ್ರಿ 7 ಗಂಟೆಯಲ್ಲಿ ಕಾರಿನಲ್ಲಿ ಊರು ಸುತ್ತುತ್ತಿದ್ದ. ಈಶಾನ್ಯ ವಲಯದ ರಾಜ್ಯಸಾರಿಗೆ ಸಂಸ್ಥೆಯ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಅದಕ್ಕೆ ಮುತ್ತಿಕ್ಕಿದ್ದಾರೆ. ಕೆಂಡಾಮಂಡಲಗೊಂಡ ವಸಂತ, ಕಾರಿಂದ ಇಳಿದು ಚಾಲಕನ ಮೇಲೆ ಮುಗಿಬಿದ್ದಿದ್ದಾರೆ. ಬಸ್ ಮೇಲೆ ಕಲ್ಲುಗಳನ್ನು ಒಗೆದಿದ್ದಾರೆ ಎಂದೆಲ್ಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ಘಟನೆ
ನಡೆಯಬಾರದಾಗಿತ್ತು. ನನ್ನ ಮಗನ ಕೃತ್ಯವನ್ನು ಬೆಂಬಲಿಸುವುದಿಲ್ಲ. ದೂರವಾಣಿ ಮೂಲಕ ಚಾಲಕ ನನ್ನನ್ನು ಸಂಪರ್ಕಿಸಿದ್ದ. ಕಾರಿಗೆ ಬಸ್ ತಾಕಿರುವುದನ್ನು ಖಚಿತಪಡಿಸಿದ' ಎಂದು ಬೆಳಮಗಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications