ಸನಾತನ ಸಂಪ್ರದಾಯದಲ್ಲಿ ವರುಣ್ ವಿವಾಹ ಮಾ. 6ಕ್ಕೆ
ವಾರಣಾಸಿ,
ಫೆ.23: ವರುಣ್ ಗಾಂಧಿ ಮತ್ತು ಯಾಮಿನಿ ರಾಯ್ ಚೌಧರಿ ಅವರ ವಿವಾಹ ಸಂಪೂರ್ಣವಾಗಿ ಸನಾತನ ಸಂಪ್ರದಾಯದಲ್ಲಿ ಕಂಚಿ ಕಾಮಕೋಟಿ ಪಿಠಂನ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಅವರ ಸಮ್ಮುಖದಲ್ಲಿ ಮಾರ್ಚ್ 6ರಂದು ಇಲ್ಲಿ ನೆರವೇರಲಿದೆ. id="toptextpromo">ಇಲ್ಲಿನ
ಹನುಮಾನ್ ಘಾಟ್‌ನಲ್ಲಿರುವ ಶ್ರೀ ಕಾಶಿ ಕಾಮಕೋಟೀಶ್ವರ ದೇವಾಲಯದಲ್ಲಿ ಇಂದಿರಾಗಾಂಧಿ ಮೊಮ್ಮಗ, ಸಂಜಯ್ ಗಾಂಧಿ ಹಾಗೂ ಮೇನಕಾ ಗಾಂಧಿ ಅವರ ಏಕೈಕ ಪುತ್ರ ವರುಣ್ ಮದುವೆ ನಡೆಯಲಿದೆ. ವಿವಾಹಕ್ಕಾಗಿ ಕೆಲವೇ ಮಂದಿಗೆ ಆಮಂತ್ರಣ ನೀಡಲಾಗಿದೆ. ಶಂಕರಾಚಾರ್ಯ ಅವರ ಉಪಸ್ಥಿತಿಯನ್ನು ದೇವಸ್ಥಾನ ಮತ್ತು ಮಠದ ಮ್ಯಾನೇಜರ್ ವಿ.ಎಸ್. ಮಣಿ ಖಚಿತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೇವಸ್ಥಾನದಲ್ಲಿ
ಈ ಬಾರಿ ಮಹಾಶಿವರಾತ್ರಿ ವಿಶೇಷವಾಗಿ ನಡೆಯಲಿದ್ದು, ವರುಣ್ ಅವರ ವಿವಾಹಕ್ಕಾಗಿ ಏರ್ಪಾಡುಗಳು ಇನ್ನೂ ಆರಂಭವಾಗಬೇಕಿದೆ. ವರುಣ್‌ರ ತಾಯಿ, ಸಂಸದೆ ಮನೇಕಾ ಗಾಂಧಿ ಅವರು ಶಿವರಾತ್ರಿ ವೇಳೆಗೆ ಇಲ್ಲಿಗೆ ಆಗಮಿಸಲಿದ್ದು, ತಮ್ಮ ಪುತ್ರನ ವಿವಾಹ ಕಾರ್ಯಕ್ರಮದ ಉಸ್ತುವಾರಿ ವಹಿಸಲಿದ್ದಾರೆ ಎಂದು ಮಣಿ ಹೇಳಿದ್ದಾರೆ.











Click it and Unblock the Notifications