ಮಲ್ಕನ್‌ಗರಿ ಜಿಲ್ಲಾಧಿಕಾರಿ ಕೃಷ್ಣ ಮಾವೊ ಬಂಧಮುಕ್ತ
ಮಲ್ಕನ್‌ಗರಿ
(ಒರಿಸ್ಸಾ), ಫೆ. 23: ಇಲ್ಲಿನ ಅಪಹೃತ ಜಿಲ್ಲಾಧಿಕಾರಿ ಆರ್. ವಿನೀಲ್ ಕೃಷ್ಣ ಮತ್ತು ಎಂಜಿನಿಯರ್ ಪವಿತ್ರಾ ಮಾಝಿ ಅವರನ್ನು ಜಿಲ್ಲೆಯ ಚಿತ್ರಕೊಂಡ ಬಳಿ ಮಂಗಳವಾರ ತಡರಾತ್ರಿ ಮಾವೊ ಬಂಡುಕೋರರು ಬಂಧಮುಕ್ತಗೊಳಿಸಿದ್ದಾರೆ. ಅದಕ್ಕೂ ಮುನ್ನ ಒರಿಸ್ಸಾ ಸರಕಾರವು ಅಪಹರಣಕ್ಕೆ ಕಾರಣವಾಗಿದ್ದ ಬಂಡುಕೋರರ ಅಷ್ಟೂ ಬೇಡಿಕೆಗಳನ್ನು ಪೂರೈಸಿತ್ತು. ಇದರೊಂದಿಗೆ ಒಂದು ವಾರ ಕಾಲ ನಡೆದ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. id="toptextpromo">ಮಲ್ಕನ್‌ಗಿರಿಗೆ
ತೆರಳುವ ಮರ್ಗದಲ್ಲಿ ಕೃಷ್ಣ ಮತ್ತು ಮಾಝಿ ಅವರನ್ನು ಸಾವಿರಾರು ಜನ ಸಂಭ್ರಮದಿಂದ ಸ್ವಾಗತಿಸಿದರು. ಮೂಲಗಳ ಪ್ರಕಾರ ಬಂಡುಕೋರರು ಇಬ್ಬರಿಗೂ ಯಾವುದೇ ತೊಂದರೆ ನೀಡಿಲ್ಲ. ಕಳೆದ ಬುಧವಾರ ಸಂಜೆ ಜಿಲ್ಲೆಯ ಬಲಿಮೇಲಾ ಅಣೆಕಟ್ಟೆ ಬಳಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾಗ ಇಬ್ಬರನ್ನೂ ಬಂಡುಕೋರರು ಅಪಹರಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಸಂಧಾನಕಾರರಾದ
ಪ್ರೊ. ಎಚ್. ಹರಗೋಪಾಲ್, ಪ್ರೊ. ಆರ್. ಸೋಮೇಶ್ವರ ರಾವ್ ಮತ್ತು ದಂಡಪಾಣಿ ಮೊಹಂತಿ ಅವರು ಭುವನೇಶ್ವರದ ಝಾರ್‌ಪಾಡ ಜೈಲಿನಲ್ಲಿ ಬಂಧಿತ ಮಾವೋವಾದಿ ಉಗ್ರ ಗುಂತಿ ಪ್ರಸಾದಂ ಜತೆ ಮಂಗಳವಾರ ಮಾತುಕತೆ ನಡೆಸಿ, ಉಗ್ರರ ಎಲ್ಲ 15 ಬೇಡಿಕೆಗಳಿಗೆ ಸರಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದ್ದರು. ಸಂಧಾನ ಯಶಸ್ವಿಯಾಗಿ ಅಪಹರಣ ಪ್ರಕರಣಕ್ಕೆ ತೆರೆಬೀಳಲು ಇದು ರಹದಾರಿಯಾಯಿತು.











Click it and Unblock the Notifications