ಕೇಂದ್ರ ಸರಕಾರಿ ನೌಕರರೂ ಲೋಕಾಯುಕ್ತ ವ್ಯಾಪ್ತಿಗೆ

Santosh Hegde
ಬೆಂಗಳೂರು, ಫೆ.18: ಕೇಂದ್ರ ಸರಕಾರದ ನೌಕರರು ಲಂಚ ಕೇಳಿದಾಗ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರಲು ನೀಡಲು ಹಿಂದೆಮುಂದೆ ನೋಡುವ ಪ್ರಮೇಯ ಇನ್ನು ಮುಂದೆ ನಿಮಗಿಲ್ಲ. ಏಕೆಂದರೆ ಕೇಂದ್ರ ಸರಕಾರಿ ನೌಕರರ ಮೇಲೂ ಲೋಕಾಯುಕ್ತ ತನ್ನ ಬಲೆಬೀಸಬಹುದು. ಸಿಬಿಐ ಭ್ರಷ್ಟಾಚಾರ ನಿಯಂತ್ರಣ ದಳದ ನಿರ್ದೇಶಕರು ಈ ಸಂಬಂಧ ಲೋಕಾಯುಕ್ತಕ್ಕೆ ಇತ್ತೀಚೆಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವುದಕ್ಕೆ ಹಸಿರು ನಿಶಾನೆ ತೋರಿದೆ.

ಇಷ್ಟು ದಿನ ರಾಜ್ಯ ಸರಕಾರಿ ನೌಕರರನ್ನು ಮಾತ್ರ ತನ್ನ ಬಲೆಗೆ ಬೀಳಿಸುತ್ತಿದ್ದ ಲೋಕಾಯುಕ್ತ ಪೊಲೀಸರಿಗೆ ಕೇಂದ್ರ ನೌಕರರನ್ನೂ ತನ್ನ ಖೆಡ್ಡಾಗೆ ಬೀಳಿಸುವ ಅಧಿಕಾರ ಪ್ರಾಪ್ತಿಯಾಗಿದೆ. ಸಿಬ್ಬಂದಿ ಕೊರತೆ ಮತ್ತು ಸಂವಹನ ಸಮಸ್ಯೆ ಹಿನ್ನೆಲೆಯಲ್ಲಿ ಸಿಬಿಐ ಲೋಕಾಯುಕ್ತರ ನೆರವು ಪಡೆಯಲು ನಿರ್ಧರಿಸಿದೆ. ಲೋಕಾಯುಕ್ತ ಎಡಿಜಿಪಿ ರೂಪಕುಮಾರ್ ದತ್ತಾ ಈವಿಚಾರವನ್ನು ದೃಢಪಡಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳ ಲೋಕಾಯುಕ್ತ ಎಸ್ಪಿ ಹಾಗೂ ಡಿವೈಎಸ್ಪಿಗಳಿಗೆ ಈ ಸಂಬಂಧ ಆರ್.ಕೆ. ದತ್ತಾ ಅವರು ಸೂಚನೆ ಕಳಿಸಿದ್ದು, ಕೇಂದ್ರ ನೌಕರರನ್ನು ಲಂಚ ಪ್ರಕರಣದಲ್ಲಿ ಬಂಧಿಸಲು ಕ್ರಮ ತೆಗೆದುಕೊಳ್ಳುವ ಆದೇಶ ಹೊರಡಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರು ಎಂಬ ಭಿನ್ನತೆ ಎಲ್ಲಿದೆ!? ಸಾರ್ವಜನಿಕ ಕೆಲಸಕ್ಕೆ ಜನಸಾಮಾನ್ಯರಿಂದ ಹಣ ಪಡೆಯುವುದು ಅಪರಾಧ. ಆದ್ದರಿಂದ ಕೇಂದ್ರ ಸರಕಾರಿ ನೌಕರರು ಲಂಚಕ್ಕೆ ಕೈಚಾಚಿದಾಗ ಸಾರ್ವಜನಿಕರು ಇನ್ನು ಮುಂದೆ ಅವರನ್ನು ನೇರವಾಗಿ ಲೋಕಾಯುಕ್ತಕ್ಕೆ ಒಪ್ಪಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+