ಸುಧಾರಣಾ ಬಜೆಟ್, ಪ್ರತಿಪಕ್ಷಗಳದ್ದೇ ಚಿಂತೆ: ಸಿಂಗ್
ನವದೆಹಲಿ,
ಫೆ.16: ಸುಧಾರಣೆಗಳನ್ನು ಕೈಬಿಟ್ಟಿಲ್ಲ. ಮುಂದಿನ ಬಜೆಟ್‌ನಲ್ಲಿ ಹೆಚ್ಚು ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಘೋಷಿಸಿದ್ದಾರೆ. ಆದರೆ ಮಹತ್ವದ ವಿಧೇಯಕಗಳನ್ನು ಸಂಸತ್ತಿನಲ್ಲಿ ಮಂಡಿಸಲು ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. id="toptextpromo">ಸಂಪಾದಕರ
ಜತೆ ಬುಧವಾರ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಸಿಂಗ್, ಸರಕಾರ ಆರ್ಥಿಕ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಇದರ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ಸರಕು ಮತ್ತು ಸೇವಾ ತೆರಿಗೆ ತಿದ್ದುಪಡಿ ವಿಧೇಯಕ ಮಹತ್ವದ್ದಾಗಿದೆ. ಮೂಲಸೌಕರ್ಯ ಬಂಡವಾಳ ಹೂಡಿಕೆಗೆ ಹೆಚ್ಚು ಇಂಬು ನೀಡಲು ಸರಕಾರಿ-ಖಾಸಗಿ-ಸಹಭಾಗಿತ್ವದ ಮಾದರಿ ಅಳವಡಿಸಿಕೊಳ್ಳುವುದಾಗಿ ಹೇಳಿದರು. ಆದರೆ ಪ್ರತಿಪಕ್ಷಗಳು ಅದರಲ್ಲೂ ಬಿಜೆಪಿ ಇದಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ ಎಂದು ಪ್ರಧಾನಿ ಇದೇ ಸಂದಭದಲ್ಲಿ ಕಿಡಿಕಾರಿದರು. id='are-slot-1' class='oiad oi-axt oiadv'> id='top-searched-articles'>2ಜಿ
ಸ್ಪೆಕ್ಟ್ರಂ ಹಂಚಿಕೆಗಾಗಿ ಅಳವಡಿಸಿಕೊಂಡ ವಿಧಿ ವಿಧಾನದ ಬಗ್ಗೆಯಾಗಲಿ ಅಥವಾ ಯಾವ ಕಂಪನಿಗಳಿಗೆ ಪರವಾನಗಿ ಹಂಚಲಾಗಿದೆ ಎಂಬುದರ ಬಗ್ಗೆಯಾಗಲಿ ನನಗೇನೂ ತಿಳಿಯದು. ಅದನ್ನು ಸಂಪುಟದಲ್ಲಿಯೂ ಚರ್ಚಿಸಲಿಲ್ಲ ಎಂದು ಹೇಳುವ ಮೂಲಕ 2ಜಿ ಸ್ಪೆಕ್ಟ್ರಂ ಹಗರಣವನ್ನು ಪ್ರಧಾನಿ ಸಿಂಗ್ ಅವರು ಸಂಪೂರ್ಣವಾಗಿ ಅಂದಿನ ದೂರಸಂಪರ್ಕ ಖಾತೆ ಸಚಿವ ಎ. ರಾಜಾ ಕೊರಳಿಗೇ ಸುತ್ತಿದರು.











Click it and Unblock the Notifications