ಡಿಕೆಶಿಗೆ ಅವಮಾನ : ಎಚ್ಡಿಕೆ ವಿರುದ್ಧ ಅಭಿಮಾನಿಗಳ ಕಿಡಿ

ಫೆ.12ರಂದು ಅಭಿನಂದನಾ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ರವರು 'ಬಿಜೆಪಿಯೊಂದಿಗೆ ಡಿಕೆಶಿಯವರು ಒಳಒಪ್ಪಂದ ಮಾಡಿಕೊಂಡು ದಾರಿತಪ್ಪಿದ ಮಗನಾಗಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವೈಯಕ್ತಿಕವಾಗಿ ನಿಂದನೆ ಮಾಡಿದ್ದರು. ಆದರೆ ನಿಜವಾಗಿಯೂ ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿರುವವರು ಕುಮಾರಸ್ವಾಮಿಯವರು ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮೈಸೂರು ಜಿ.ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ನೈತಿಕ ಬೆಂಬಲ ನೀಡಿದ್ದರೂ ಕೂಡ ಅಧಿಕಾರದ ಆಸೆಯಿಂದ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಇವರು ಡಿ.ಕೆ.ಶಿವಕುಮಾರ್‌ರವರ ವಿರುದ್ಧ ಇಲ್ಲದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಎಚ್.ಡಿ.ಕುಮಾರಸ್ವಾಮಿ ಈ ಅವಹೇಳನಕಾರಿ ಮಾತನ್ನು ಹಿಂತೆಗೆದುಕೊಳ್ಳಬೇಕು. ಮತ್ತು ಕ್ಷಮೆ ಯಾಚಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಹಾಗೂ ಜಿಲ್ಲಾ ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಘಟಕಗಳೂ ಕೂಡ ಭಾಗವಹಿಸಿದ್ದವು. ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ದೇವೇಂದ್ರಪ್ಪ, ವಿಜಯಕುಮಾರ್, ಯೋಗೇಶ್, ಎಸ್.ಪಿ.ದಿನೇಶ್, ಸುಂದರೇಶ್, ರವಿಕುಮಾರ್, ಕೆ.ಲಕ್ಷ್ಮಣ್, ಮಧುಸೂಧನ್, ಈಶ್ವರ್, ಕಿರಣ್‌ಗೌಡ, ರಮೇಶ್ ಹೆಗ್ಡೆ, ಎಸ್.ಕೆ.ಅಶೋಕ್, ಪ್ರವೀಣ್‌ಪಟೇಲ್, ಆರ್.ರಂಗನಾಥ್, ಆರೀಫ್, ರಂಜಿತ್, ಚಿಕ್ಕಮರಡಿ ಗಣೇಶ್, ನರಸಿಂಹ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications