ಬೆಂಗಳೂರಿನಲ್ಲಿ ಹಾಡುಹಗಲೇ ಅರ್ಧ ಕೆಜಿ ಚಿನ್ನ ಲೂಟಿ

Daylight robbery in Bangalore
ಬೆಂಗಳೂರು, ಫೆ. 12 : ಸೂರ್ಯ ನೆತ್ತಿಯ ಮೇಲೆ ಇರುವ ಹೊತ್ತಿನಲ್ಲಿ ಸೂರ್ಯ ಜ್ಯುವೆಲ್ಲರಿ ಚಿನ್ನದಂಗಡಿಯಿಂದ ಅರ್ಧ ಕೆಜಿ ಬಂಗಾರದ ಒಡವೆಗಳನ್ನು ಲೂಟಿ ಮಾಡಿದ ಘಟನೆ ನಗರದ ಪರಪ್ಪನ ಅಗ್ರಹಾರದ ನಾಗನಾಥಪುರದಲ್ಲಿ ಜರುಗಿದೆ.

ಗ್ರಾಹಕರ ಸೋಗಿನಲ್ಲಿ ಬಂದ ಮೂವರು ಚಿನ್ನ ಕೊಳ್ಳುವ ನೆಪದಲ್ಲಿ ತೋರಿಸಲೆಂದು ತೆಗೆದಿಟ್ಟಿದ್ದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಂಡು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಅರ್ಧ ಕೆಜಿ ಚಿನ್ನ ಲಪಟಾಯಿಸಲಾಗಿದೆ ಎಂದು ಸೂರ್ಯ ಜ್ಯುವೆಲ್ಲರಿ ಅಂಗಡಿಯ ಮಾಲಿಕ ತಾರಾನಾಥ್ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳ್ಳರು ಹಿಂದೆ ಕೂಡ ಎರಡು ಬಾರಿ ಈ ಚಿನ್ನದಂಗಡಿಗೆ ಬಂದಿದ್ದರು. ಮಾರವಾಡಿ ಭಾಷೆ ಮಾತನಾಡುತ್ತಿದ್ದ ಅವರು ತಾರಾನಾಥನನ್ನು ಪರಿಚಯ ಮಾಡಿಕೊಂಡಿದ್ದಾರೆ. ಈ ಪರಿಚಯದ ದುರ್ಲಾಭ ಪಡೆದು ತೆಗೆದಿಟ್ಟಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಯಾವುದೋ ಕಾರಣಕ್ಕೆಂದು ತಾರಾನಾಥ್ ಅವರು ಹೊರ ಹೋದಾಗ ಈ ಘಟನೆ ಜರುಗಿದೆ. ಒಳಗೆ ಬಂದು ನೋಡಿದಾಗ ಚಿನ್ನವೂ ಇಲ್ಲ, ಲೂಟಿಕೋರರೂ ಇಲ್ಲ. ಕ್ಷಣಾರ್ಧದಲ್ಲಿ ಚೀಲದಲ್ಲಿ ಚಿನ್ನವನ್ನು ತುಂಬಿಕೊಂಡು ಮೂವರೂ ಒಂದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+