ಬಹಿರಂಗ ಚುಂಬನಕ್ಕೆ ಶ್ರೀರಾಮಸೇನೆ ನಕಾರ

ಹಾಗಾಗಿ ವ್ಯಾಲೈಂಟೇನ್ ಡೇ ದಿನದಂದು ಪ್ರೇಮಿಗಳು ತಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಅಡ್ಡಾಡುವುದೇ ಒಳ್ಳೆಯದು. ಶ್ರೀರಾಮಸೇನೆ ದೆಹಲಿ ಘಟಕ ಇಂದಿನಿಂದಲೇ ಎಲ್ಲೆಡೆ ಸಂಚರಿಸತೊಡಗಿದ್ದು, ಸಾರ್ವಜನಿಕವಾಗಿ ಚುಂಬನಕ್ರಿಯೆಯಲ್ಲಿ ತೊಡಗುವ ಪ್ರೇಮಿಗಳ ಮೇಲೆ ಹದ್ದಿನ ಕಣ್ಣು ಇಡಲಿದೆ ಎಂದು ಮಿಡ್ ಡೇ ವರದಿ ಮಾಡಿದೆ.
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ, ಪ್ರೇಮಿಗಳ ದಿನಾಚರಣೆ ಕೈಬಿಡಿ ಎಂಬ ವಿಷಯದ ಬಗ್ಗೆ ಮೂರು ದಿನಗಳ ಜಾಗೃತಿ ಸಮಾವೇಶವನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಪ್ರೆಮೋಖ್ಯಾನ ಉಪನ್ಯಾಸ ಕೇಳಿ ಕೂಡಾ ಪ್ರೇಮಿಗಳು ಪಾರ್ಕ್, ಪಬ್, ಹೋಟೆಲ್, ರಸ್ತೆಗಳಲ್ಲಿ ಪ್ರೀತಿಯ ಚೇಷ್ಟೆ ಆರಂಭಿಸಿದರೆ ಸೇನೆ ಕಾರ್ಯಕರ್ತರು ಕೆಮೆರಾ ಮೂಲಕ ಪ್ರೇಮಿಗಳ ಬಹಿರಂಗ ಸರಸವನ್ನು ಸೆರೆ ಹಿಡಿಯುತ್ತಾರೆ. ಸಾಮಾನ್ಯ ಕೆಮೆರಾ ಜೊತೆಗೆ ಗುಪ್ತವಾದ ಮತ್ತೊಂದು ಕೆಮೆರಾ ಹೊತ್ತ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತದೆ ಎಂದು ಶ್ರೀರಾಮಸೇನೆಯ ವಕ್ತಾರರು ಹೇಳಿದ್ದಾರೆ.
ಪ್ರೀತಿಗೆ ಅಡ್ಡಿಪಡಿಸುವುದಿಲ್ಲ.. ಆದರೆ?:












Click it and Unblock the Notifications