ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ಕಿನ ಹಕ್ಕಿಗಳ ಚಿತ್ತಾರಕ್ಕೆ ಉದ್ಯಾನನಗರಿ ರೆಡಿ

|
Google Oneindia Kannada News

Air Show in Bangalore
ಏಷ್ಯಾದ ಬೃಹತ್ ಏರ್ ಶೋಗೆ ಬೆಂಗಳೂರು ಸಜ್ಜಾಗಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನರು ಬಾನಿನತ್ತ ಬೆರಗಿನಿಂದ ನೋಡುವ ದಿನ ಹತ್ತಿರದಲ್ಲಿದೆ. ನಾಡಿದ್ದು ಅಂದರೆ ಫೆಬ್ರವರಿ 9ರಿಂದ ಫೆಬ್ರವರಿ 13ರವರೆಗೆ ಬೆಂಗಳೂರಿನ ಯಲಹಂಕದಲ್ಲಿ 8ನೇ ಏರ್ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ನೂರಾರು ಉಕ್ಕಿನ ಹಕ್ಕಿಗಳು ಬಾನಿನಲ್ಲಿ ಚಿತ್ತಾರ ಬಿಡಿಸಲಿವೆ.

ಯಲಹಂಕದಲ್ಲಿರುವ ಏರ್ ಫೋರ್ಸ್ ಸ್ಟೇಷನ್ ಗೆ ವಿವಿಧ ಕಡೆಯಿಂದ ಯುದ್ಧವಿಮಾನಗಳು, ಜೆಟ್ ಗಳು, ವಿಮಾನಗಳು ಬಂದಿಳಿಯುತ್ತಿವೆ. ಇಟಲಿ ಏರ್ ಫೋರ್ಸ್ ನಿಂದ ಎರಡು ಯೂರೊಫೈಟರ್ ಟೈಪಾನ್ಸ್ ಈಗಾಗಲೇ ಬಂದಾಗಿದೆ. ವೈಮಾನಿಕ ಪ್ರದರ್ಶನ ನೀಡುವ ತಂಡದಲ್ಲಿ ಸೂರ್ಯ ಕಿರಣ್, ಸಾರಂಗ್, ಫ್ಲೈಯಿಂಗ್ ಬುಲ್ಸ್ ರೆಡಿಯಾಗಿ ಆಕಾಶ ನೋಡುತ್ತಿವೆ.

ಆಸ್ಟ್ರೇಲಿಯಾದ ಫ್ಲೈಯಿಂಗ್ ಬುಲ್ಸ್ ಮೊದಲ ಬಾರಿಗೆ ಬೆಂಗಳೂರಿನ ಏರ್ ಶೋಗೆ ಆಗಮಿಸಿರುವುದು ವಿಶೇಷ. ಇದರೊಂದಿಗೆ ಆಗ್ರಾದಿಂದ ಆಕಾಶ್ ದೀಪ್ ಕೂಡ ಬರಲಿದೆ. ಬೋಯಿಂಗ್ ನ ಎಫ್-16, ಮಾರ್ಟಿನ್ ನ ಎಫ್ಎ/18, ಸುಕೊಯಿ ಎಂಕೆಐ 30, ಗ್ರಿಪ್ಪೆನ್, ಯೂರೋಕೊಪ್ಟಾರ್ ಸೇರಿದಂತೆ ಸುಮಾರು 50 ಬಗೆಯ ವಿವಿಧ ವಿಮಾನಗಳು ಪ್ರದರ್ಶನದಲ್ಲಿರಲಿವೆ.

ವೈಮಾನಿಕ ಪ್ರದರ್ಶನಕ್ಕೆ ಸಂಬಂಧಿಸಿದ ಶೇಕಡಾ 80ರಷ್ಟು ಕೆಲಸಗಳು ಪೂರ್ಣಗೊಂಡಿದ್ದು, ಉಕ್ಕಿನ ಹಕ್ಕಿಗಳ ಚಿತ್ತಾರ ನೋಡಲು ಕೆಲವೇ ದಿನ ಬಾಕಿ ಉಳಿದಿದೆ. ಬೆಂಗಳೂರು ಏರ್ ಶೋಗೆ ಅತ್ಯಧಿಕ ಸಂಖ್ಯೆಯಲ್ಲಿ ವಿದೇಶಿಯರು ಭೇಟಿ ನೀಡುವ ನಿರೀಕ್ಷೆಯಿದೆ. ಸುಮಾರು 70 ಸಾವಿರ ವಿದೇಶಿಯರು ಭೇಟಿ ನೀಡುವ ನಿರೀಕ್ಷೆಯನ್ನು ರಕ್ಷಣಾ ಸಚಿವಾಲಯದ ಮೂಲಗಳು ವ್ಯಕ್ತಪಡಿಸಿವೆ.

ವೈಮಾನಿಕ ಪ್ರದರ್ಶನದಲ್ಲಿ ಪ್ರಮುಖ ಯುದ್ಧವಿಮಾನಗಳು ಸೇರಿದಂತೆ ಸುಮಾರು 260 ವಿದೇಶಿ ವಿಮಾನ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ರಕ್ಷಣಾ ಸಚಿವಾಲಯದ ವೈಮಾನಿಕ ಪ್ರದರ್ಶನ ಸಮಿತಿಯ ನಿರ್ದೇಶಕ, ವಿಂಗ್ ಕಮಾಂಡರ್ ಎಂ ಡಿ ಸಿಂಗ್ ಹೇಳಿದ್ದಾರೆ.

ಟಿಕೇಟ್ ಎಲ್ಲಿ ದೊರಕುತ್ತದೆ?
ವೈಮಾನಿಕ ಪ್ರದರ್ಶನದ ದಿನದಿಂದಲೇ ಪ್ರದರ್ಶನ ಸ್ಥಳದಲ್ಲಿ ಟಿಕೇಟ್ ದೊರಕುತ್ತದೆ. ಗರುಡಾ ಮಾಲ್, ಫೋರಂ ಮತ್ತು ಮಂತ್ರಿ ಮಾಲ್ ಗಳಲ್ಲೂ ಟಿಕೇಟ್ ದೊರಕುತ್ತದೆ. ಟಿಕೇಟ್ ದರ 400 ರೂಪಾಯಿ. ವೀಕೆಂಡ್ ದಿನಗಳಲ್ಲಿ ಮಾತ್ರ 500 ರೂಪಾಯಿ.
ಪ್ರತಿದಿನ ಪೂರ್ವಾಹ್ನ 10 ಗಂಟೆಗೆ ಮತ್ತು ಅಪರಾಹ್ನ 2.30ರಿಂದ ಸಂಜೆ 5ಗಂಟೆವರೆಗೆ ಎರಡು ವೈಮಾನಿಕ ಪ್ರದರ್ಶನ ನಡೆಯಲಿದೆ. ಆದರೆ ಮೊದಲ ದಿನ ಪೂರ್ವಾಹ್ನದ ಪ್ರದರ್ಶನ ಇರುವುದಿಲ್ಲ.

In English

ಏರೋ ಶೋ ಬಗ್ಗೆ ಇನ್ನಷ್ಟು..
* ವಿಶ್ವದಲ್ಲಿ ನಡೆಯುವ ವೈಮಾನಿಕ ಪ್ರದರ್ಶನಗಳಲ್ಲಿ ಏರೋ ಇಂಡಿಯಾಕ್ಕೆ ಅಗ್ರ 5ನೇ ಸ್ಥಾನವಿದೆ. ಇದು ಏಷ್ಯಾದಲ್ಲಿ ನಡೆಯುವ ಪ್ರಮುಖ ವೈಮಾನಿಕ ಪ್ರದರ್ಶನ.
* ಜಾಗತಿಕ ಆರ್ಥಿಕ ಹಿಂಜರಿತ ಕೊನೆಗೊಂಡಿರುವುದರಿಂದ ಭಾರತದಲ್ಲಿ ಅವಕಾಶಗಳ ಹುಡುಕಾಟದಲ್ಲಿ ದಾಖಲೆ ಸಂಖ್ಯೆಯಲ್ಲಿ ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
* 5 ದಿನಗಳ ಪ್ರದರ್ಶನದಲ್ಲಿ ಸುಮಾರು 1.75 ಲಕ್ಷಕ್ಕಿಂತ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
* ಸುಮಾರು 160 ದೇಶಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕೇಂದ್ರ ಸರಕಾರ 64 ದೇಶಗಳಿಗೆ ಆಮಂತ್ರಣ ಕಳುಹಿಸಿದೆ.
* ಏರೋ ಇಂಡಿಯಾದಲ್ಲಿ 5 ತೇಜಸ್ ಯುದ್ಧವಿಮಾನಗಳು ಪ್ರದರ್ಶನ ನೀಡಲಿವೆ.

English summary
India will hold its largest air show in Bangalore starting from 2011, Feb 9 to 13, where 70 delegations and 160 countries are expected to take part. The companies would bring their latest aerospace products including fighter jet transport and civilian aircraft, for sure the show is a treat for spectators eyes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X