ಉ.ಕ : ಅಕ್ರಮ ದೇಗುಲ ತೆರವಿಗೆ ಇಂದೇ ಕೊನೆ ದಿನ
ಕಾರವಾರ,
ಜ. 31 : ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯ ಅಕ್ರಮ ದೇವಾಲಯ, ಮಸೀದಿ, ಚರ್ಚ್ ಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನೀಡಿರುವ ಗಡುವು ಜ. 31ಕ್ಕೆ ಕೊನೆಗೊಳ್ಳಲಿದೆ. ಸರಕಾರ ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿತ್ತು, ಕಂದಾಯ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಈಗಾಗಲೇ ಸರ್ವೇ ನಡೆಸಿ ಜಿಲ್ಲೆಯ ಒಟ್ಟು 8 ದೇವಸ್ಥಾನ, ಒಂದು ಚರ್ಚು ಮತ್ತು ಒಂದು ಮಸೀದಿ ಅಕ್ರಮವಾಗಿವೆ ಎಂದು ನಿರ್ಧರಿಸಿದ್ದಾರೆ. id="toptextpromo">ಆದರೆ
ಬಹುತೇಕ ದೇವಾಲಯ, ಮಸೀದಿ, ಚರ್ಚ್ ಗಳನ್ನು ತೆರವು ಮಾಡಲು ದೇವಸ್ಥಾನ ಸಮಿತಿ ಸದಸ್ಯರು, ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಕಾವಲಿನಲ್ಲಿ ಇಂಥ ದೇವಾಲಯಗಳ ತೆರವಿಗೆ ಮುಂದಾಗುವ ಸಾಧ್ಯತೆ ಇದೆ. ಕಾರವಾರ, ಭಟ್ಕಳ ಮತ್ತು ಅಂಕೋಲಾದಲ್ಲಿ ತಲಾ ಒಂದು, ಕುಮಟಾದ ಎರಡು ಹಾಗೂ ಮುಂಡಗೋಡಿನ ಮೂರು ದೇವಸ್ಥಾನಗಳು ಅಕ್ರಮವಾಗಿವೆ. ಅಲ್ಲದೇ ಮುಂಡಗೋಡು ತಾಲೂಕಿನ ಒಂದು ಚರ್ಚ್ ಹಾಗೂ ಒಂದು ಮಸೀದಿ ಕೂಡ ಅಕ್ರಮವಾಗಿದೆ ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದೆ. id='are-slot-1' class='oiad oi-axt oiadv'> id='top-searched-articles'>ಅಕ್ರಮ
ದೇವಾಲಯಗಳನ್ನು ಜ. 31ರೊಳಗೆ ತೆರವು ಮಾಡುವಂತೆ ಇಲ್ಲದಿದ್ದಲ್ಲಿ ಜಿಲ್ಲಾಡಳಿತ ತೆರವು ಕಾರ್ಯಕೈಗೊಳ್ಳಬೇಕಾಗುತ್ತದೆ ಎಂದು ಸಂಬಂಧಪಟ್ಟ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳ ಆಡಳಿತ ಸಮಿತಿಗಳಿಗೆ ಈಗಾಗಲೇ ನೊಟೀಸ್ ಜಾರಿ ಮಾಡಿತ್ತು. ಹಲವು ದೇವಾಲಯದ ಆಡಳಿತ ಮಂಡಳಿ ಸದಸ್ಯರು ದೇವಾಲಯ ತೆರವು ಕೈಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ನ ಆದೇಶವಾಗಿರುವುದರಿಂದ ನಾವು ದೇವಸ್ಥಾನಗಳ ಮೇಲೆ ಕ್ರಮಕೈಗೊಳ್ಳುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಬಿ ಎನ್ ಕೃಷ್ಣಯ್ಯ ಹೇಳಿದ್ದಾರೆ.











Click it and Unblock the Notifications